ಬೆಂಗಳೂರು: ನಾಡ ಗೀತೆ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕಿಕ್ಕೇರಿ ಕೃಷ್ಣಮೂರ್ತಿ ಎನ್ನುವವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೈಸೂರು ಅನಂತಸ್ವಾಮಿ ಅವರ ದಾಟಿಯಲ್ಲಿ 2.30 ನಿಮಿಷ ಹಾಡಬೇಕು ಎಂದು ಸರ್ಕಾರ ಆದೇಶ ಮಾಡಿತ್ತು ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಹತ್ತಿದ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಸರ್ಕಾರಕ್ಕೆ ನೋಟೀಸ್ ನೀಡಿದ ಕೋರ್ಟ್ , ನಾಡಗೀತೆಯ ದಾಟಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅಂತ ಕೋರ್ಟ್ ಆದೇಶ ನೀಡಿದೆ.
BIGG NEWS : ರಾಜ್ಯದ ಜನತೆಗೆ ಇಂದಿನಿಂದ `ಕರೆಂಟ್ ಶಾಕ್’ : ಪ್ರತಿ ಯೂನಿಟ್ ಮೇಲೆ 23-43 ಪೈಸೆವರೆಗೆ ಹೆಚ್ಚಳ
ಕಿಕ್ಕೇರಿ ಕೃಷ್ಣಮೂರ್ತಿ ಅವರು ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಮೈಸೂರು ಅನಂತಸ್ವಾಮಿ ಅವರು ಒಂದು ಪಲ್ಲವಿ ಎರಡು ಚರಣ ಮಾತ್ರ ಹಾಡಿದ್ದಾರೆ, ಸಿ ಅಶ್ವಥ್ ಅವರು ಪೂರ್ಣ ಪಾಠ ಹಾಡಿದ್ದಾರೆ, ಲೀಲಾವತಿ ಅವರ ಕಮಿಟಿ ತರಾತುರಿಯಲ್ಲಿ ಅನಂತಸ್ವಾಮಿ ಅವರ ದಾಟಿಯಲ್ಲಿ ಹಾಡಬೇಕು ಎಂದು ಶಿಫಾರಸು ಮಾಡಿದೆ, ಇದನ್ನು ಸರ್ಕಾರ ಆದೇಶ ಮಾಡಿದೆ ಇದನ್ನು ನಾನು ಪ್ರಶ್ನೆ ಮಾಡಿ ಕೋರ್ಟ್ ಮೆಟ್ಟಿಲು ಹತ್ತಿದ್ದೇನೆ ಅನಂತಸ್ವಾಮಿ ಅವರ ದಾಟಿನೇ ಇಲ್ಲ ನಾಡಗೀತೆಗೆ
ಅವರು ಮೈಸೂರು, ಆಕಾಶವಾಣಿ, ದೂರದರ್ಶನ ಎಲ್ಲಾ ಕಡೆ ಹಾಡಿದ್ದಾರೆ ಅದರಲ್ಲಿ ಪೂರ್ತಿ ಇಲ್ಲ ಅಶ್ವಥ್ ಅವರು 2.30 ನಿಮಿಷಕ್ಕೆ ಪೂರ್ತಿ ಪಾಠ ಬಳಸಿಕೊಂಡಿದ್ದಾರೆ, ಸರ್ಕಾರದ ವಿರುದ್ಧ ನನ್ನ ಹೋರಾಟ ಅಲ್ಲ ಸಮಿತಿ ವಿರುದ್ಧ ಅನಂತಸ್ವಾಮಿ ಬಳಕೆ ಮಾಡಿಕೊಂಡ್ರೆ ಒಂದು ಪಲ್ಲವಿ, ಎರಡು ಚರಣ ಅಷ್ಟೇ ಹಾಡಬೇಕು ಅಶ್ವಥ್ ಅವರು ಹಾಡಿರುವ ಹಾಡು ಪೂರ್ತಿ ಇದೆ ಅದನ್ನೇ ಹಾಡಬೇಕು ಕೋರ್ಟ್ ದಾಖಲೆ ಕೇಳಿದೆ ಎಲ್ಲಾ ದಾಖಲೆ ಕೊಡಲಿ ನಾನು ಕೊಡುತ್ತೇನೆ 25 ಲಕ್ಷ ಜನ ಅಶ್ವಥ್ ಅವರ ದಾಟಿಯಲ್ಲಿ ವಿಧಾನಸೌಧದ ಮುಂದೆ ಸರ್ಕಾರವೇ ಬಂದು ಹಾಡಿದೆ ಇದು ಅಧಿಕೃತ ದಾಖಲೆ ಇದೆ ಅಂತ ಹೇಳಿದ್ದಾರೆ.