ಕೆಎನ್ಎನ್ಡಿಜಿಟಲ್ ಡೆಸ್ಕ್ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನ ನಾಲ್ಕು ಪ್ರದೇಶಗಳನ್ನ ತನ್ನ ದೇಶದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದ್ದಾರೆ. ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತ್ರ ಪುಟಿನ್ ಮತ್ತು ಇತರ ಅಧಿಕಾರಿಗಳು ‘ರಷ್ಯಾ, ರಷ್ಯಾ… ರಷ್ಯಾ’ ಎಂಬ ಘೋಷಣೆಗಳನ್ನ ಕೂಗಿದ್ರು. ಈ ನಾಲ್ಕು ಪ್ರದೇಶಗಳಲ್ಲಿ ಐದು ದಿನಗಳ ಜನಾಭಿಪ್ರಾಯ ಸಂಗ್ರಹಣೆ ನಡೆಸಲಾಯಿತು. ರಷ್ಯಾದೊಂದಿಗೆ ಉಕ್ರೇನ್ನ ಲುಹಾನ್ಸ್ಕ್, ಡೊನೆಟ್ಸ್ಕ್, ಜಪೋರಿಜಿಯಾ ಮತ್ತು ಖೆರ್ಸನ್ ವಿಲೀನವನ್ನು ಪುಟಿನ್ ಘೋಷಿಸಿದ್ದಾರೆ. ಈ ಪ್ರದೇಶಗಳ ಪ್ರತ್ಯೇಕತಾವಾದಿ ಮುಖಂಡರು ಮತ್ತು ಅಧಿಕಾರಿಗಳು ಬಹುಕಾಲದಿಂದ ಜನಾಭಿಪ್ರಾಯ ಸಂಗ್ರಹಣೆಗೆ ಒತ್ತಾಯಿಸುತ್ತಿದ್ದಾರೆ.
ವರದಿಗಳ ಪ್ರಕಾರ, ಕ್ರೆಮ್ಲಿನ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ, ರಷ್ಯಾ ಅಧ್ಯಕ್ಷ ಪುಟಿನ್ ರಷ್ಯಾ ಸೋವಿಯತ್ ಒಕ್ಕೂಟವನ್ನ ಮರಳಿ ರಚಿಸಲು ಹೋಗುವುದಿಲ್ಲ ಎಂದು ಹೇಳಿದರು. ಉಕ್ರೇನ್ ಜೊತೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಿದೆ. ಆದ್ರೆ, ಹೊಸದಾಗಿ ವಿಲೀನಗೊಂಡ ಭಾಗಗಳನ್ನ ವಾಪಸ್ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಈಗ ನಾಲ್ಕು ಹೊಸ ಪ್ರದೇಶಗಳು ದೇಶಕ್ಕೆ ಸೇರಿಕೊಂಡಿವೆ ಎಂದು ಪುಟಿನ್ ಹೇಳಿದರು. ಇದರೊಂದಿಗೆ, ಪುಟಿನ್, “ನಾವು ಮಿಲಿಟರಿ ಕ್ರಮವನ್ನು ನಿಲ್ಲಿಸಲು ಮತ್ತು ಸಂಧಾನದ ಮೇಜಿಗೆ ಮರಳಲು ಕೈವ್ಗೆ ಕರೆ ನೀಡುತ್ತೇವೆ. ನಾವು ಮಾತುಕತೆಗೆ ಸಿದ್ಧರಿದ್ದೇವೆ” ಎಂದರು.
ಸೇನಾ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಯೋಧರನ್ನ ವೀರರು ಎಂದು ಹೇಳಿದರು
ರಷ್ಯಾಕ್ಕೆ ಸೇರಲು ಜನರ ಆಯ್ಕೆಯು ಇತಿಹಾಸವನ್ನ ಆಧರಿಸಿದೆ ಎಂದು ಪುಟಿನ್ ಹೇಳಿದರು. ವಿಶೇಷ ಮಿಲಿಟರಿ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡವರು ಗ್ರೇಟ್ ರಷ್ಯಾದ ವೀರರು. “ಉಕ್ರೇನ್ನಲ್ಲಿರುವ ನಮ್ಮ ಸಹೋದರ ಸಹೋದರಿಯರು ಒಂದೇ ಜನರು” ಎಂದು ಪುಟಿನ್ ಹೇಳಿದರು.
ಪಾಶ್ಚಿಮಾತ್ಯ ದೇಶಗಳ ಮೇಲೆ ಪುಟಿನ್ ಕೋಪ
ವ್ಲಾಡಿಮಿರ್ ಪುಟಿನ್, “ಪಾಶ್ಚಿಮಾತ್ಯವು ರಷ್ಯಾದ ವಿರುದ್ಧ ಹೈಬ್ರಿಡ್ ಯುದ್ಧವನ್ನ ಮುನ್ನಡೆಸುತ್ತಿದೆ. ಅವರು ರಷ್ಯಾವನ್ನು ವಸಾಹತುವನ್ನಾಗಿ ಮಾಡಲು ಬಯಸುತ್ತಾರೆ. ಪಶ್ಚಿಮವು ರಷ್ಯಾವನ್ನು ಸಣ್ಣ ರಾಜ್ಯಗಳಾಗಿ ಒಡೆಯಲು ಪ್ರಯತ್ನಿಸುತ್ತಿದೆ. ಪರಮಾಣು ಶಸ್ತ್ರಾಸ್ತ್ರಗಳ ಉದಾಹರಣೆಯನ್ನ ಅಮೆರಿಕ ನೀಡಿದೆ.