ಕೆಎನ್ ಎನ್ ನ್ಯೂಸ್ ಡೆಸ್ಕ್ : ಮದುವೆ ಎನ್ನುವುದು ಗಂಡು- ಹೆಣ್ಣು ನಡುವೆ ಪ್ರವಿತ್ರ ಬಂಧನ. ಮದುವೆಗೂ ಮುಂಚೆ ಗಂಡ-ಹೆಂಡತಿ ನೂರೆಂಟಗು ಕನಸು ಹೊತ್ತಿರುತ್ತಾರೆ. ಮದುವೆ ನಂತ್ರ ಸಂಬಂಧ ಚೆನ್ನಾಗಿತ್ತು ಅಂದರೆ ಸಾಕು ಜೀವನ ಕೂಡ ಅಷ್ಟೇ ಖುಷಿಯಿಂದ ಇರುತ್ತದೆ.
BREAKING NEWS: ಚಿಕ್ಕಮಗಳೂರಿನಲ್ಲಿ SDPI ಕಚೇರಿ ಮೇಲೆ ಪೊಲೀಸರ ದಾಳಿ; ದಾಖಲೆಗಳ ಪರಿಶೀಲನೆ | SDPI office raid
ನಾವು ಯಾವುದೇ ವ್ಯಕ್ತಿಯೊಂದಿಗೆ ಸಂಬಂಧವನ್ನು ಬೆಳೆಸಿದಾಗ ಆ ಸಂಬಂಧವನ್ನು ಸಂಪೂರ್ಣವಾಗಿ ನಿಭಾಯಿಸಲು ಪ್ರಯತ್ನಿಸುತ್ತೇವೆ. ಆದರೆ ಇನ್ನು ಕೆಲವರಿಗೆ ಹೆಂಡ್ತಿ ಜೊತೆ ಮತ್ತೊಬ್ಬಳ್ಳನ್ನು ಸಹ ಇಟ್ಟುಕೊಂಡಿರುತ್ತಾರೆ. ಮದುವೆಯಾದ ನಂತರವೂ ವ್ಯಕ್ತಿಯು ಬೇರೆ ಬೇರೆ ಉದ್ದೇಶಗಳಿಂದಾಗಿ ಇನ್ನೊಬ್ಬ ವ್ಯಕ್ತಿಗೆ ಹತ್ತಿರವಾಗುತ್ತಾರೆ. ಅದರಲ್ಲೂ ತನ್ನ ಸಂಗಾತಿ ತನ್ನ ಅಗತ್ಯಗಳನ್ನು ಪೂರೈಸದಿದ್ದಾಗ ಅನೈತಿಕ ಸಂಬಂಧವನ್ನು ಹೊಂದುವ ಸಾಧ್ಯತೆ ಹೆಚ್ಚು ಇರುತ್ತದೆ.ಇದನ್ನ ಇಟ್ಟುಕೊಳ್ಳುದಕ್ಕೂ ಕಾರಣಗಳಿವೆ ಆದರೆ ಅದೇನು ಇರಬಹುದು ಎಂದು ತಿಳಿದಕೊಳ್ಳೊಣ
ಭಾವನಾತ್ಮಕ ಸಂಬಂಧ
ಭಾವನಾತ್ಮಕ ಸಂಬಂಧವು ಯಾರೊಂದಿಗಾದರೂ ವಿಶೇಷ ಸಂಬಂಧವಾಗಿ ಪ್ರಾರಂಭವಾಗಬಹುದು. ಸಿಂಪ್ಲಿ ಹೈರ್ಡ್ ನಡೆಸಿದ ಸಮೀಕ್ಷೆಯ ಪ್ರಕಾರ, ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವ ಸಹೋದ್ಯೋಗಿಗಳ ನಡುವೆ ಇಂತಹ ಅಫೇರ್ ಆಗಾಗ ನಡೆಯುತ್ತಿರುತ್ತದೆ.
ಒನ್ ನೈಟ್ ಸ್ಟೇ
ಸಾಮಾನ್ಯವಾಗಿ ವೈವಾಹಿಕ ಜೀವನದಿಂದ ಹತಾಶರಾದಾಗ, ಜೀವನದಲ್ಲಿ ಹೊಸದನ್ನು ತರಲು ಬಯಸಿದಾಗ ಅಂತಹ ಸಂಬಂಧವನ್ನು ಬೆಳೆಸಿಕೊಳ್ಳುತ್ತಾನೆ. ಅಂತಹ ಸಂದರ್ಭಗಳಲ್ಲಿ, ಯಾವುದೇ ಭಾವನಾತ್ಮಕ ಬಾಂಧವ್ಯ ಇರುವುದಿಲ್ಲ.
BREAKING NEWS: ಚಿಕ್ಕಮಗಳೂರಿನಲ್ಲಿ SDPI ಕಚೇರಿ ಮೇಲೆ ಪೊಲೀಸರ ದಾಳಿ; ದಾಖಲೆಗಳ ಪರಿಶೀಲನೆ | SDPI office raid
ಆನ್ಲೈನ್ ಸಂಬಂಧ
ಇತ್ತೀಚಿನ ದಿನಗಳಲ್ಲಿ ಆನ್ಲೈವ್ ಕಂಡುಬರುತ್ತಿವೆ. ಆದರೆ ಆನ್ಲೈನ್ನಲ್ಲಿ ಸಿಗುವ ಪ್ರತಿ ವ್ಯಕ್ತಿಗಳು ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಅನಾಮಧೇಯರಾಗಿ ನಿಮ್ಮೊಂದಿಗೆ ಪರಿಚಯ ಬೆಳೆಸಿ, ವಂಚಿಸುವವರಾಗಿರುತ್ತಾರೆ.
ಸಂಗಾತಿಯನ್ನು ದೂರವಾಗಿಸುವ ತಂತ್ರ
ಕೆಲವೊಮ್ಮೆ ವ್ಯಕ್ತಿಯು ಮದುವೆಯ ಬಂಧನದಿಂದ ಹೊರಬರಲು ಬಯಸಿದಾಗ ಈ ರೀತಿಯ ಅನೈತಿಕ ಸಂಬಂಧದ ಪ್ರಕರಣಗಳು ಕಂಡುಬರುತ್ತವೆ.