ಚಿಕ್ಕಮಗಳೂರು : ಜಿಲ್ಲೆಯ ಎಸ್ ಡಿ ಪಿ ಐ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನೆ ಮೇಲೆ ರೈಡ್ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ನಮ್ಮ ಮನೆಯನ್ನು ಯಾಕೆ ರೇಡ್ ಮಾಡುತ್ತೀದ್ದಿರಿ ಎಂಬ ಚಾಂದ್ ಪಾಷಾ ಪ್ರಶ್ನೆಗೆ ಉತ್ತರಿಸಿದ ಪೊಲೀಸರು ‘ ನಮಗೆ ಆದೇಶ ಇದೆ, ಅದಕದಕೆ ರೈಡ್ ಮಾಡುತ್ತಿದ್ದೇವೆ. ನಿಮ್ಮ ಮನೆಯನ್ನು ಸರ್ಚ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಮನೆಯೊಳಗೆ ಧಾವಿಸಿದ ಪೊಲೀಸರು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಪಿಎಫ್ಐ ಕಾರ್ಯಕರ್ತ ಆರೀಫ್ ಮನೆಗೂ ಪೊಲೀಸರು ದಾಳಿ ನಡೆಸಿದ್ದು, ಸರ್ಚ್ ವಾರೆಂಟ್ ನೊಂದಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಸಿಪಿಐ ಸತ್ಯನಾರಾಯಣ, ಪಿಎಸ್ಐ ಸಜಿತ್, ಕೀರ್ತಿ ಕುಮಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.