ನವದೆಹಲಿ: ಭಾರತದ ನಂಬರ್ ಒನ್ ಸುದ್ದಿ ಅಗ್ರಿಗೇಟರ್ ಅಪ್ಲಿಕೇಶನ್ ಆಗಿರುವ ಡೈಲಿಹಂಟ್ಮತ್ತು ಅದಾನಿ ಗ್ರೂಪ್ ಬೆಂಬಲಿತ ವೇದಿಕೆಯಾದ ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಸಹಯೋಗದೊಂದಿಗೆ ದೆಹಲಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಮುಕ್ತಾಯ ಕಂಡಿದೆ. ಇದೇ ವೇಳೇ ರಾಷ್ಟ್ರವ್ಯಾಪಿ ವಿಡಿಯೋ ಮತ್ತು ಪ್ರಿಂಟ್ ವಿಭಾಗದಲ್ಲಿ ನಡೆದ ಬರಹಗಾರರ ಸ್ಪರ್ಧೆಯಲ್ಲಿ 12 ವಿಜೇತರನ್ನು ಘೋಷಣೆ ಮಾಡಲಾಯಿತು.
ನಾಲ್ಕು ತಿಂಗಳ ಅವಧಿಯ ಈ ತರಬೇತಿ ಕಾರ್ಯಕ್ರಮವು ಮೇ ತಿಂಗಳಲ್ಲಿ ಪ್ರಾರಂಭವಾಯಿತು, ತರಬೇತಿಗೆ ದೇಶದ ವಿವಿದ ಕಡೆಗಳಿಂದ 1000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿತ್ತು, ಅದರಲ್ಲಿ 20 ಪ್ರತಿಭಾವಂತ ಬರಹಗಾರರನ್ನು ಶಾರ್ಟ್ಲಿಸ್ಟ್ ಮಾಡಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳು ಪ್ರಮುಖ ಮಾಧ್ಯಮ ಸಂಸ್ಥೆಯಾದ MICA ಯಲ್ಲಿ ಎಂಟು ವಾರಗಳ ದೀರ್ಘ ಫೆಲೋಶಿಪ್ ಮತ್ತು ಎರಡು ವಾರಗಳ ಕಲಿಕೆಯಲ್ಲಿ ಭಾಗವಹಿಸಿದ್ದರು.
ತರಬೇತಿಯ ನಂತರ ಆರು ವಾರಗಳ ಕಾಲ ತಮಗೆ ನಿಗದಿ ಪಡಿಸಿದ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾದರು, ಇದಲ್ಲದೇ ಅವರುಗಳು ಪ್ರಮುಖ ಮಾಧ್ಯಮ ಪ್ರಕಾಶನ ಸಂಸ್ಥೆಗಳಿಂದ ಮಾರ್ಗದರ್ಶನವನ್ನು ಕೂಡ ಪಡೆದರು. ಈ ಅವಧಿಯಲ್ಲಿ, ಭಾಗವಹಿಸಿದ್ದವರು ಬರಹಕ್ಕೆ ಸಂಬಂಧಪಟ್ಟ ಅನೇಕ ಪ್ರಮುಖ ಕಲಿಕೆಗಳನ್ನು ಕಲಿತುಕೊಂಡರು.
ತೀರ್ಪುಗಾರರ ತಂಡವು ಡೈಲಿಹಂಟ್ ಸಂಸ್ಥಾಪಕ ವೀರೇಂದ್ರ ಗುಪ್ತರಂತಹ ಉದ್ಯಮದ ಪ್ರಮುಖರನ್ನು ಒಳಗೊಂಡಿತ್ತು, MG ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ನ ಸಿಇಒ ಮತ್ತು ಎಡಿಟರ್-ಇನ್-ಚೀಫ್ ಸಂಜಯ್ ಪುಗಾಲಿಯಾ, ದಿ ಇಂಡಿಯನ್ ಎಕ್ಸ್ಪ್ರೆಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಗೋಯೆಂಕಾ, ಫಿಲ್ಮ್ ಕಂಪ್ಯಾನಿಯನ್ ಸಂಸ್ಥಾಪಕಿ ಅನುಪಮಾ ಚೋಪ್ರಾ, SheThePeopleನ ಶೈಲಿ ಚೋಪ್ರಾ, ಗಾಂವ್ ಕನೆಕ್ಷನ್ನ ನೀಲೇಶ್ ಮಿಶ್ರಾ ಮತ್ತು ಪಂಕಜ್ ಮಿಶ್ರಾ ಸೇರಿದಂತೆ ಅನೇಕ ಪ್ರಮುಖರು ಈ ವೇಳೆ ಇದ್ದರು.
#StoryForGlory ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಸುಗಮಗೊಳಿಸಲು ಮತ್ತು ಸೃಜನಶೀಲ ವಿಷಯದೊಂದಿಗೆ ದೊಡ್ಡ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ರೂಪಿಸಲು ಅವಕಾಶವನ್ನು ಒದಗಿಸಿದೆ.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಡೈಲಿಹಂಟ್ ಸಂಸ್ಥಾಪಕ ವೀರೇಂದ್ರ ಗುಪ್ತಾ ಅವರು ಭಾರತದ ಪ್ರತಿಭಾವಂತ ರನ್ನು ಕಂಡುಹಿಡಿಯಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಮರ್ಥರಾಗಿದ್ದೇವೆ. ಡಿಜಿಟಲ್ ಸುದ್ದಿ ಮತ್ತು ಮಾಧ್ಯಮ ಕ್ಷೇತ್ರವು ವಿಶೇಷವಾಗಿ ಕಥೆ ಹೇಳುವ ಕಲೆಯಲ್ಲಿ ಗಣನೀಯವಾಗಿ ಮುಂದುವರೆದಿದೆ ನಾವು #StoryForGlory ವೇದಿಕೆ ಮೂಲಕ ನಾವು ಭಾರತದ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಮ್ಮ ಬದ್ಧತೆಯನ್ನು ಮರುಸ್ಥಾಪಿಸುತ್ತೇವೆ ಮತ್ತು ಭಾರತದ ಉದಯೋನ್ಮುಖ ಕಥೆಗಾರರಿಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಉತ್ಸಾಹವನ್ನು ಹಂಚಿಕೊಳ್ಳಲು ಅವಕಾಶಗಳನ್ನು ನೀಡುತ್ತೇವೆ ಅಂತ ತಿಳಿಸಿದರು.
ಇದೇ ವೇಳೆ AMG ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ನ ಸಿಇಒ ಮತ್ತು ಮುಖ್ಯ ಸಂಪಾದಕ ಸಂಜಯ್ ಪುಗಾಲಿಯಾ ಮಾತನಾಡಿ, ಶ್ರೀಮಂತ ಮತ್ತು ವೈವಿಧ್ಯಮಯ ಕಥೆಗಳ ನಾಡಾದ ಭಾರತವು ಅನೇಕ ಕಥೆಗಾರರ ನೆಲೆಯಾಗಿದೆ. ಡೈಲಿಹಂಟ್ ಜೊತೆಯಲ್ಲಿ, ನಾವು ಭಾರತದ ಮುಂದಿನ ಪೀಳಿಗೆಯ ಚರಿತ್ರಕಾರರನ್ನು ಗುರುತಿಸಲು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ಸರಿಯಾದ ಬೆಂಬಲ ಮತ್ತು ವೇದಿಕೆಯನ್ನು ನೀಡಲು ಸಮರ್ಥರಾಗಿದ್ದೇವೆ. ನಾವು ಸ್ವೀಕರಿಸಿದ ಪ್ರತಿಕ್ರಿಯೆಯು ಅಗಾಧವಾಗಿದೆ, ಈ ವೇದಿಕೆಯು ನಮ್ಮ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಭಾರತದ ಅತ್ಯಂತ ಪ್ರತಿಭಾವಂತ ಸೃಷ್ಟಿಕರ್ತರಿಗೆ ಅವರ ಸೃಜನಶೀಲ ದೃಷ್ಟಿಕೋನಗಳಿಗೆ ಜೀವ ತುಂಬುವ ಮಾರ್ಗವನ್ನು ನೀಡುವ ಮಾರ್ಗಗಳನ್ನು ಹುಡುಕುತ್ತದೆ ಅಂಥ ತಿಳಿಸಿದರು.
ಅಂದ ಹಾಗೇ StoryForGlory ಅನ್ನು ವ್ಯವಹಾರಗಳು, ಸುದ್ದಿ, ವಿಜ್ಞಾನ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿಯಂತಹ ಪ್ರಕಾರಗಳಲ್ಲಿ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ವಿಷಯಗಳ ವೀಡಿಯೊ ನಿರ್ಮಾಣ ಮತ್ತು ಬರಹಗಾರ ವೇದಿಕೆಯಾಗಿದೆ.
ಡೈಲಿಹಂಟ್ ಬಗ್ಗೆ : ಭಾರತದ ನಂಬರ್ ಒನ್ ಸುದ್ದಿ ಅಗ್ರಿಗೇಟರ್ ಅಪ್ಲಿಕೇಶನ್ ಆಗಿದ್ದು, ಪ್ರತಿದಿನ 15 ಭಾಷೆಗಳಲ್ಲಿ ಒಂದು ಮಿಲಿಯನ್ಗಳಿಗೂ ಹೆಚ್ಚು ಕಂಟೆಟ್ಗಳು ಸಿಗುತ್ತವೆ. Dailyhunt ನಲ್ಲಿನ ವಿಷಯವು 50000 ವಿವಿಧ ಮಾಧ್ಯಮ ಸ್ಥಂಸ್ಥೆಗಳು ಹಾಗು ಬರಹಗಾರ ಬರಹಗಳನ್ನು ಒಳಗೊಂಡಿದೆ. Dailyhunt ಪ್ರತಿ ತಿಂಗಳು 350 ಮಿಲಿಯನ್ ಮಾಸಿಕ ಸಕ್ರಿಯ ಬಳಿಕೆ ದಾರರನ್ನು ಒಳಗೊಂಡಿದ . ಪ್ರತಿ ದಿನ ಸಕ್ರಿಯ ಬಳಕೆದಾರರಿಗೆ (DAU) ಖರ್ಚು ಮಾಡುವ ಸಮಯವು ಪ್ರತಿ ಬಳಕೆದಾರರಿಗೆ ದಿನಕ್ಕೆ 30 ನಿಮಿಷಗಳುಾಗಿದೆ. ಡೈಲಿಹಂಟ್ ಅಪ್ಲಿಕೇಶನ್ Android, iOS ಮತ್ತು ಮೊಬೈಲ್ ವೆಬ್ನಲ್ಲಿ ಲಭ್ಯವಿದೆ.
ಅದಾನಿ ಗ್ರೂಪ್ ಬಗ್ಗೆ : ಭಾರತದ ಅಹಮದಾಬಾದ್ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಅದಾನಿ ಗ್ರೂಪ್, ಲಾಜಿಸ್ಟಿಕ್ಸ್ (ಬಂದರುಗಳು, ವಿಮಾನ ನಿಲ್ದಾಣಗಳು, ಲಾಜಿಸ್ಟಿಕ್ಸ್, ಹಡಗು ಮತ್ತು ರೈಲು), ಸಂಪನ್ಮೂಲಗಳು, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ನವೀಕರಿಸಬಹುದಾದ ಶಕ್ತಿ, ಅನಿಲ ಮತ್ತು ವಿತರಣೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇದು ಭಾರತದಲ್ಲಿ ವೈವಿಧ್ಯಮಯ ವ್ಯವಹಾರಗಳ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಕಂಪನಿಯಾಗಿದೆ. ಮೂಲಸೌಕರ್ಯ, ಕೃಷಿ (ಸರಕುಗಳು, ಖಾದ್ಯ ತೈಲ, ಆಹಾರ ಉತ್ಪನ್ನಗಳು, ಕೋಲ್ಡ್ ಸ್ಟೋರೇಜ್ ಮತ್ತು ಧಾನ್ಯ ಸಿಲೋಸ್), ರಿಯಲ್ ಎಸ್ಟೇಟ್, ಸಾರ್ವಜನಿಕ ಸಾರಿಗೆ ಮೂಲಸೌಕರ್ಯ, ಗ್ರಾಹಕ ಹಣಕಾಸು ಮತ್ತು ರಕ್ಷಣೆ, ಮತ್ತು ಇತರ ವಲಯಗಳಲ್ಲಿ ಗುರುತಿಸಿಕೊಂಢಿದೆ ಸುಸ್ಥಿರತೆ, ವೈವಿಧ್ಯತೆ ಮತ್ತು ಹಂಚಿಕೆಯ ಮೌಲ್ಯಗಳ ತತ್ವಗಳ ಆಧಾರದ ಮೇಲೆ ತನ್ನ CSR ಕಾರ್ಯಕ್ರಮಗಳ ಮೂಲಕ ಪರಿಸರವನ್ನು ರಕ್ಷಿಸಲು ಮತ್ತು ಸಮುದಾಯಗಳನ್ನು ಸುಧಾರಿಸಲು ಈ ಕಂಪನಿ ಪಣ ತೊಟ್ಟಿದೆ. ಹೆಚ್ಚಿನ ಮಾಹಿತಿಗೆ www.adani.comಗೆ ಭೇಟಿ ನೀಡಿ.