ದೆಹಲಿ: ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಎಲ್ಲರಿಗೂ ಸಂವೇದನಾಶೀಲ ಭಾವನೆಗಳು ಇದ್ದೇ ಇರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ಘಟನೆ ನಡೆದಿದೆ.
ಹೌದು, ಬುಧವಾರ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಟ್ರಕ್-ಬಸ್ ಡಿಕ್ಕಿಯಾಗಿ ಹತ್ತು ಮಂದಿ ಸಾವನ್ನಪ್ಪಿದ್ದು, ಸುಮಾರು 41 ಮಂದಿ ಗಾಯಗೊಂಡಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಲಕ್ನೋ ವಿಭಾಗೀಯ ಆಯುಕ್ತೆ ರೋಷನ್ ಜೇಕಬ್ ಗಾಯಗೊಂಡವರ ಪರಿಸ್ಥಿತಿ ವಿಚಾರಿಸಲು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಬಾಲಕನೊಬ್ಬನ ಸ್ಥಿತಿ ಕಂಡು ರೋಷನ್ ಜೇಕಬ್ ಭಾವುಕರಾಗಿದ್ದಾರೆ.
#WATCH |Lakhimpur Kheri bus-truck collision: Lucknow Divisional Commissioner Dr Roshan Jacob breaks down as she interacts with a mother at a hospital&sees condition of her injured child
At least 7 people died&25 hospitalised in the accident; 14 of the injured referred to Lucknow pic.twitter.com/EGBDXrZy2C
— ANI UP/Uttarakhand (@ANINewsUP) September 28, 2022
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಅಪಘಾತದಲ್ಲಿ ಗಾಯಗೊಂಡ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸುವಾಗ ರೋಷನ್ ಜೇಕಬ್ ಭಾವುಕರಾಗಿದ್ದಾರೆ. ಈ ವೇಳೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
BREAKING NEWS: ಉಧಂಪುರದಲ್ಲಿ ನಿಂತಿದ್ದ ಬಸ್ನಲ್ಲಿ ಬಾಂಬ್ ಸ್ಫೋಟ: ಕೇವಲ 8 ಗಂಟೆಯ ಅಂತರದಲ್ಲಿ ಮತ್ತೊಂದು ಘಟನೆ
BIG NEWS: ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿದ ಪ್ರಬಲ ʻಇಯಾನ್ʼ ಚಂಡಮಾರುತ, ದೋಣಿ ಮುಳುಗಿ ಹಲವರು ನಾಪತ್ತೆ