ಬೆಂಗಳೂರು : ದಸರಾ ಹಬ್ಬದ ಹೊತ್ತಲ್ಲೇ ಪ್ರವಾಸಿ ಗೈಡ್ ಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್ ನೀಡಿದ್ದು, ಗೈಡ್ ಗಳ ಮಾಸಿಕ ವೇತನವನ್ನು 2000 ರೂ ದಿಂದ 5000 ರೂಗೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ.
ವಿಶ್ವಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದರು. ಗೈಡ್ ಗಳಿಗೆ ಇದುವರೆಗೆ 2000 ರೂ ವೇತನ ನೀಡಲಾಗುತ್ತಿತ್ತು, ಅದನ್ನು 5 ಸಾವಿರಕ್ಕೆ ಹೆಚ್ಚಳ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಶೀಘ್ರದಲ್ಲೇ ಗೈಡ್ ಗಳ ಮಾಸಿಕ ವೇತನವನ್ನು 2000 ರೂ ದಿಂದ 5000 ರೂಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಪ್ರವಾಸೋದ್ಯಮಕ್ಕಾಗಿ ರಾಜ್ಯಕ್ಕೆ ವಾರ್ಷಿಕ ಮೂವತ್ತು ಲಕ್ಷ ಜನ ಬರುತ್ತಿದ್ದು, ಮುಂದಿನ ಮೂರು ವರ್ಷದಲ್ಲಿ ಒಂದು ಕೋಟಿಯಾಗಬೇಕೆಂದು ಗುರಿ ಹಾಕಿಕೊಳ್ಳಲಾಗಿದೆ. ಪಿಪಿಪಿ ಮಾಡಲ್ನಲ್ಲಿ ರಾಜ್ಯದ ವಿವಿಧ ಕಡೆ ಹೋಟೆಲ್ ಸ್ಥಾಪಿಸಲಾಗುತ್ತಿದೆ. ಟೂರಿಸ್ಟ್ ಗೈಡ್ ಸುಳ್ಳು ಹೇಳಬಾರದು, ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ನಮ್ಮ ಸರ್ಕಾರ ಹೊಸದಾಗಿ ಕ್ಯಾರವಾನ್ ಸೌಲಭ್ಯ ಕಲ್ಪಿಸಿದೆ ಇದರಿಂದ ಪ್ರವಾಸಿ ತಾಣ ಗುರುತಿಸಿ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು ಎಂದರು.
BIGG NEWS : ಸಾರಿಗೆ ನೌಕರ’ರಿಗೆ ದಸರಾ ಗಿಫ್ಟ್: ‘ಗಳಿಕೆ ರಜೆ ನಗದೀಕರಣ’ಕ್ಕೆ ಅವಕಾಶ | KSRTC Employees
BIG NEWS: ‘ಲಲಿತ ಪಂಚಮಿ’ಯಂದು ಮುಜರಾಯಿ ದೇವಸ್ಥಾನಗಳಲ್ಲಿ ಸಾಮೂಹಿಕ “ಕುಂಕುಮಾರ್ಚನೆ”ಗೆ ರಾಜ್ಯ ಸರ್ಕಾರದಿಂದ ಆದೇಶ