ಕೆಎನ್ಎನ್ಡಿಜಿಟಲ್ ಡೆಸ್ಕ್ : ಯೋಚಿಸಲು ಸಹ ಕಷ್ಟವಾಗುವಂತಹ ಆನೇಕ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣ ಸಿಗುತ್ವೆ. ಅದ್ರಂತೆ, ಇದೇ ರೀತಿಯ ವೀಡಿಯೋ ಸಧ್ಯ ವೈರಲ್ ಆಗ್ತಿದೆ. ಇದು ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದೆ. ಇದರಲ್ಲಿ, ಪೂರ್ಣ ತರಗತಿಯಲ್ಲಿ, ಒಬ್ಬ ಹುಡುಗ ತನ್ನ ನೆಚ್ಚಿನ ಹುಡುಗಿಗೆ ಪ್ರಪೋಸ್ ಮಾಡಲು ಪ್ರಾರಂಭಿಸುತ್ತಾನೆ. ತರಗತಿಯಲ್ಲಿ ಹಾಜರಿರುವ ಎಲ್ಲಾ ವಿದ್ಯಾರ್ಥಿಗಳು ಹುಡುಗನ ಈ ಶೈಲಿಯನ್ನ ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ಇನ್ನು ಹುಡುಗಿ ಕೂಡ ತಡಮಾಡದೆ ಅವನ ಪ್ರಸ್ತಾಪವನ್ನ ಸ್ವೀಕರಿಸುತ್ತಾಳೆ.
ಶಾಲೆಯಲ್ಲಿ ಹುಡುಗಿಗೆ ಪ್ರಸ್ತಾಪ
ವೀಡಿಯೊವನ್ನ ನೋಡಿದಾಗ, ಹುಡುಗನು ತನ್ನ ತರಗತಿಯ ಹುಡುಗಿಯನ್ನ ತುಂಬಾ ಇಷ್ಟಪಡುತ್ತಾನೆ ಎಂದು ತಿಳಿದುಬಂದಿದೆ. ಹುಡುಗ ಕೈಯಲ್ಲಿ ಹೂವುಗಳನ್ನ ಹಿಡಿದುಕೊಂಡು ಹುಡುಗಿಯನ್ನ ತಲುಪಿ, ಆಕೆಯ ಮುಂದೆ ಮಂಡಿಯೂರಿ ನಂತ್ರ ಅವಳಿಗೆ ಪ್ರಪೋಸ್ ಮಾಡುತ್ತಾನೆ. ಹುಡುಗಿ ಕೂಡ ತಡಮಾಡದೇ ಅವನ ಪ್ರಸ್ತಾಪವನ್ನ ಸ್ವೀಕರಿ, ಎದ್ದೇಳುವಂತೆ ಸಂಕೇತಿಸುತ್ತಾಳೆ. ಇನ್ನು ಹುಡುಗಿಗೆ ಕೆಲವು ಉಡುಗೊರೆಗಳನ್ನ ಸಹ ಹುಡುಗ ತಂದಿದ್ದು, ಅಲ್ಲಿಯೇ ತೆರೆದು ನೋಡಲು ಪ್ರಾರಂಭಿಸುದನ್ನ ವಿಡಿಯೋ ಕಾಣಬೋದು.
ತರಗತಿಯ ವೀಡಿಯೊ ವೈರಲ್ ಆಗಿದೆ
https://www.instagram.com/tv/CjAxH4CIGD2/?utm_source=ig_web_copy_link
ಹುಡುಗನು ತರಗತಿಯಲ್ಲಿ ಹುಡುಗಿಗೆ ಪ್ರಪೋಸ್ ಮಾಡಿದ ರೀತಿಯನ್ನ ನೋಡಿ, ತರಗತಿಯಲ್ಲಿ ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳು ನಗುತ್ತಿರುವುದನ್ನ ಕಾಣಬಹುದು. ಈ ವೀಡಿಯೊವನ್ನು ನೋಡಿದ ನಂತರ, ನೆಟ್ಟಿಗರು ಬಾಕ್ಸ್ನಲ್ಲಿ ವಿಭಿನ್ನ ಪ್ರತಿಕ್ರಿಯೆ ಕಾಮೆಂಟ್ಗಳನ್ನ ನೀಡುತ್ತಿದ್ದಾರೆ. ಒಬ್ಬ ವ್ಯಕ್ತಿ, ‘ವಾವ್ ಮಗ ಮತ್ತು ಮಗಳು ಸಾಕಷ್ಟು ಹೆಸರನ್ನ ಗಳಿಸುತ್ತಾರೆ’ ಎಂದು ಬರೆದಿದ್ದಾನೆ.