ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರದಲ್ಲಿ ಪೊಲೀಸರು ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ ಇಬ್ಬರು ಪಿಎಫ್ ಐ ಕಾರ್ಯಕರ್ತರನ್ನ ಬಂಧಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
BREAKING NEWS : ಕೋಲಾರದಲ್ಲಿ7 ʻ PFI’ ಮುಖಂಡರು ಪೊಲೀಸರ ವಶಕ್ಕೆ | PFI leaders arrested
ಚಾಮರಾಜನಗರ ಪಿಎಫ್ಐ ಜಿಲ್ಲಾಧ್ಯಕ್ಷ ಕಪಿಲ್ ಅಹ್ಮದ್, ಕಾರ್ಯದರ್ಶಿ ಸುಯೇಬ್ ಉಲ್ಲಾಖಾನ್ ಅವರನ್ನು ಮದ್ಯರಾತ್ರಿ ಬಂದಿಸಿ ಸಿಮ್ಸ್ ಅಲ್ಲಿ ಇಬ್ಬರ ಆರೋಗ್ಯ ತಪಾಸಣೆ ಮಾಡಿ ತಹಶಿಲ್ದಾರ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಅವರ ಸೂಚನೆ ಮೇರೆಗೆ ನ್ಯಾಯಾಂಗ ಬಂದನಕ್ಕೆ ಚಾಮರಾಜನಗರ ಪೊಲೀಸರು ಒಪ್ಪಿಸಿದ್ದಾರೆ. ಎನ್ಐಎ ಸೂಚನೆ ಹಾಗೂ ಕೇಂದ್ರ ಗುಪ್ತಾಚಾರ ಇಲಾಖಾ ಮಾಹಿತಿ ಆಧರಿಸಿ ಮುಂಜಾಗ್ರತಾ ಕ್ರಮವಾಗಿ ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಎಸ್ಪಿ ಶಿವಕುಮಾರ್ ಕನ್ನಡ ನ್ಯೂಸ್ ನೌ ಗೆ ತಿಳಿಸಿದ್ದಾರೆ.