ಬೆಂಗಳೂರು : ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಸೋಮವಾರ ಸಿಐಡಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರಾಜ್ಯ ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕಿ ಸೇರಿದಂತೆ ಶಿಕ್ಷಣ ಇಲಾಖೆಯ ಐವರು ಹಿರಿಯ ಅಧಿಕಾರಿಗಳು ಹಾಗೂ ಓರ್ವ ಕಂಪ್ಯೂಟರ್ ಆಪರೇಟರ್ ನನ್ನು ಬಂಧಿಸಿದೆ.
BIGG NEWS : ರಾಜ್ಯದ ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್ : ನಿರಂತರ 7 ಗಂಟೆ ವಿದ್ಯುತ್ ಪೂರೈಕೆ |Sunil Kumar
ರಾಜ್ಯ ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕಿ ಗೀತಾ, ಪಠ್ಯ ಪುಸ್ತಕ ವಿಭಾಗದ ನಿರ್ದೇಶಕ ಮಾದೇಗೌಡ, ನಿವೃತ್ತ ಜಂಟಿ ನಿರ್ದೇಶಕರಾದ ಜಿ.ಆರ್. ಬಸವರಾಜ್, ಕೆ. ರತ್ನಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಕಚೇರಿ ಕಂಪ್ಯೂಟರ್ ಆಪರೇಟರ್ ನರಸಿಂಹರಾವ್ ಬಂಧಿತರಾಗಿದ್ದಾರೆ.
ಆರೋಪಿಗಳನ್ನು ಸಿಐಡಿ ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸವ ಹಿನ್ನೆಲೆ ಸಿಐಡಿ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಬಂಧಿತ ಐವರು ಆರೋಪಿಗಳು ಅಕ್ಟೋಬರ್ 1 ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.
ಹಣ ನೀಡಿ ಶಿಕ್ಷಕರ ಹುದ್ದೆ ಗಿಟ್ಟಿಸಿದ್ದ ಆರೋಪಿಗಳಿಗೆ ಮತ್ತೊಂದು ಕಾನೂನಿನ ಉರುಳು ಸುತ್ತಿಕೊಂಡಿದೆ. ಆರೋಪಿತ ಶಿಕ್ಷಕರು ಹಾಗೂ ಕಿಂಗ್ ಪಿನ್ ಕೆ ಎನ್ ಪ್ರಸಾದ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಸ್ತ್ರವನ್ನು ಸಿಐಡಿ ಪ್ರಯೋಗಿಸಿದೆ. ಪ್ರಕರಣದ ತನಿಖೆ ಎದುರಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಎಫ್ ಡಿ ಸಿ ಕೆ ಸಿ ಪ್ರಸಾದ್ ಸರ್ಕಾರಿ ನೌಕರನಾಗಿದ್ದಾನೆ. ಹಾಗೂ ಬಂಧಿತ 13 ಮಂದಿ ಆರೋಪಿಗಳು ಸರ್ಕಾರಿ ನೌಕರನಾಗಿದ್ದಾನೆ.