ಬಾಗಲಕೋಟೆ : ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ ಯೋಜನೆಯಡಿ ( Ganga Kalyan Yojana ) ಕೊಳವೆ ಬಾವಿ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ ಆನ್ಲೈನ್ ( Online Application ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಕುಟುಂಬದ ವಾರ್ಷಿಕ ಆದಾಯ ನಗರ ಪ್ರದೇಶಕ್ಕೆ 1,03000/- ರೂ., ಗ್ರಾಮೀಣ ಪ್ರದೇಶಕ್ಕೆ 96 ಸಾವಿರ ರೂ., ಮೀರಬಾರದು. ವಯಸ್ಸು 18 ರಿಂದ 55 ವರ್ಷ ಮೀರಿರಬಾರದು. ಅರ್ಜಿಯನ್ನು ವೆಬ್ಸೈಟ್ http://kmdconline.karnataka.gov.in ಮೂಲಕ ನವೆಂಬರ 15 ರೊಳಗಾಗಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂಸಂ.08354-236255ಗೆ ಸಂಪರ್ಕಿಸಬಹುದಾಗಿದೆ.
BREAKING NEWS : ಅ. 3ರವರೆಗೆ ‘ಪಿಎಫ್ಐ’ ನಾಯಕ ಮೊಹಮ್ಮದ್ ಅಶ್ರಫ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ