ನವದೆಹಲಿ : ದೆಹಲಿಯ ಸೌತ್ ಎಕ್ಸ್ಟೆನ್ಷನ್ ಪಾರ್ಟ್ -1 ಪ್ರದೇಶದಲ್ಲಿ ಕ್ಲಬ್ ಒಂದರ ಬೌನ್ಸರ್ಗಳು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಇಬ್ಬರು ಬೌನ್ಸರ್’ಗಳು ಹೊಡೆದಿದ್ದಾರೆ, ತನ್ನ ಬಟ್ಟೆಗಳನ್ನ ಹರಿದು ಹಾಕಲಾಗಿದೆ. ಇನ್ನುಅವ್ರು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಸೆಪ್ಟೆಂಬರ್ 18 ರಂದು ಮುಂಜಾನೆ 2:14 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆಯಿಂದ ಕರೆ ಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದು, ಮಹಿಳೆಯ ಬಟ್ಟೆ ಹರಿದಿರುವುದನ್ನ ಗಮನಿಸಿದ್ದಾರೆ. ಇನ್ನು ಇಬ್ಬರು ಬೌನ್ಸರ್ಗಳು ಮತ್ತು ಕ್ಲಬ್ನ ಮ್ಯಾನೇಜರ್ ತನ್ನ ಬಟ್ಟೆಗಳನ್ನ ಹರಿದು ಹಾಕಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ತಿಳಿಸಿದ್ದಾರೆ.
ಆರೋಪಿಗಳ ಗುರುತುಗಳನ್ನ ಪತ್ತೆಹಚ್ಚಲಾಗಿದ್ದು, ಸಂತ್ರಸ್ತೆಯನ್ನ ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಮೇರೆಗೆ ಐಪಿಸಿಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆಯನ್ನ ನಡೆಸಲಾಗಿದೆ ಎಂದು ಅವ್ರು ಹೇಳಿದರು.
ತಾನು ತನ್ನ ಸ್ನೇಹಿತರೊಂದಿಗೆ ಪಾರ್ಟಿಗಾಗಿ ಕ್ಲಬ್’ಗೆ ಬಂದಿದ್ದಾಗಿ ದೂರುದಾರರು ಹೇಳಿದ್ದು, ಅಲ್ಲಿ ಅವರು ಪ್ರವೇಶದ ಬಗ್ಗೆ ವಾಗ್ವಾದ ನಡೆಸಿದರು. ನಂತ್ರ ಬೌನ್ಸರ್’ಗಳು ಮಹಿಳೆ ಮತ್ತು ಆಕೆಯ ಸ್ನೇಹಿತರನ್ನ ಥಳಿಸಿದ್ದಾರೆ ಎಂದು ದೂರುದಾರೆ ತಿಳಿಸಿದ್ದಾರೆ ಎಂದು ಡಿಸಿಪಿ ಹೇಳಿದರು.
ತನಿಖೆಯ ಸಮಯದಲ್ಲಿ, ಕ್ಲಬ್ ಮತ್ತು ಇತರ ನೆರೆಹೊರೆಯ ಶೋರೂಂಗಳ ಸಿಸಿಟಿವಿ ಕ್ಯಾಮೆರಾಗಳನ್ನ ವಿಶ್ಲೇಷಿಸಲಾಗುತ್ತಿದೆ. ಇದಲ್ಲದೆ, ಬೌನ್ಸರ್ಗಳ ವಿವರಗಳನ್ನ ಸಹ ಕ್ಲಬ್ನಿಂದ ತೆಗೆದುಕೊಳ್ಳಲಾಗಿದೆ ಮತ್ತು ನಿಜವಾದ ಅಪರಾಧಿಗಳನ್ನ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸಾಕೇತ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ಮಹಿಳೆಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
The bouncers of a club in south #Delhi allegedly thrashed a woman and tore off her clothes, the police said on Sunday. Woman's friends were also beaten up in the brawl.@DelhiPolice pic.twitter.com/lYBXbqAtE8
— IANS (@ians_india) September 25, 2022