ಬೆಂಗಳೂರು : ನಕಲಿ ಪ್ರಮಾಣ ಪತ್ರ ನೀಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರಿ ಪಡೆದವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ನಕಲಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದ 76 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
BIGG NEWS : ಬ್ಯಾಂಕ್ ಗಳಿಂದ ರೈತರ ಆಸ್ತಿಪಾಸ್ತಿ ಜಪ್ತಿಗೆ ನಿಷೇಧ : ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ವಿಧಾನಪರಿಷತ್ ನಲ್ಲಿ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಕಲಿ ಪ್ರಮಾಣ ಪತ್ರ ನೀಡಿ ರಾಜ್ಯ ಸರ್ಕಾರಿ ಉದ್ಯೋಗ ಪಡೆದ 24 ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, ನಕಲಿ ಪ್ರಮಾಣ ಪತ್ರ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗ ಪಡೆದ 76 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಸದ್ಯ 36 ಪ್ರಕರಣಗಳು ನ್ಯಾಯಾಲಯದಲ್ಲಿದ್ದು, 21 ಜಿಲ್ಲಾ ಮಟ್ಟದ ಜಾತಿ ಪ್ರಕರಣಗಳು ಬಾಕಿ ಇವೆ. 19 ಪ್ರಕರಣಗಳು ತನಿಖಾ ಹಂತದಲ್ಲಿದ್ದು, ಇದುವರೆಗೆ ರಾಜ್ಯ ಸರ್ಕಾರಿ ಕೆಲಸ 24 ಮಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.