ಬಾಗಲಕೋಟೆ : ಸಿದ್ದರಾಮೋತ್ಸವದ ಯಶಸ್ಸಿನಿಂದ ಬಿಜೆಪಿಯವರಿಗೆ ಹೆದರಿಕೆ ಶುರುವಾಗಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ.
BREAKING NEWS : ತೀವ್ರ ಕುತೂಹಲ ಮೂಡಿಸಿದೆ ಸಚಿವ ಸುಧಾಕರ್- ಕಾಂಗ್ರೆಸ್ ನಾಯಕ ಮುನಿಯಪ್ಪ ಭೇಟಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರು ಸಿದ್ದರಾಮಯ್ಯನವರು ಬಂದರೂ ಸಹ ಹೆದರುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಒಬ್ಬರು ಶಾಸಕರಿದ್ದ ಸಂದರ್ಭದಲ್ಲೂ ನಾವು ಎದೆಗುಂದಿಲ್ಲ. ಇದೀಗ ಬಿಜೆಪಿ ವಿಶ್ವಮಟ್ಟದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ತಿರುಗೇಟು ನೀಡಿದ್ದಾರೆ.
BIG NEWS: ಚಾಕೊಲೇಟ್ ನಲ್ಲಿ ಗಾಂಜಾ ಮಿಶ್ರಣ ಆರೋಪ; ರಾಯಚೂರಿನಲ್ಲಿ ಅಬಕಾರಿ ಅಧಿಕಾರಿಗಳಿಂದ 8 ಕಡೆ ರೇಡ್
ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ 40 % ಕಮಿಷನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಂಪಣ್ಣ ಕಳೆದ 20 ವರ್ಷಗಳಿಂದ ಯಾವ ಕಾಮಗಾರಿ ಮಾಡಿದ್ದಾರೆ ತೋರಿಸಲಿ, ತಮ್ಮ ಆರೋಪದ ಕುರಿತಂತೆ ದಾಖಲೆ ನೀಡಲು ದೆಹಲಿಗೆ ಬರುವಂತೆ ಕರೆದರೂ ಅವರು ಹೋಗಿಲ್ಲ ಎಂದು ಕಿಡಿಕಾರಿದ್ದಾರೆ.