ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ದಿನದ ಕೆಲಸಗಳು ಆರಂಬವಾಗುವುದೆ ಒಂದು ಕಪ್ ಟೀ ಅಥವಾ ಕಾಫಿಯಿಂದ. ಕೆಲವರು ಟೀ ಕುಡಿದಲೇ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದುರಿಂದ ಾರೋಗ್ಯದ ಮೇಲೆ ಕೆಲವು ಕೆಟ್ಟ ಪರಿಣಾಮಗಳು ಬೀರುವ ಸಾಧ್ಯತೆ ಇರುತ್ತದೆ.
ಇದು ಅಜೀರ್ಣ ಮತ್ತು ಎದೆಯುರಿ ಉಂಟುಮಾಡಬಹುದು, ಅದಕ್ಕಾಗಿಯೇ ಟೀ ಕುಡಿಯೋದಾದ್ರೆ ಆಹಾರದ ಜೊತೆಗೇ ಕುಡಿಯಿರಿ, ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬೇಡಿ ಎಂದು ವೖದ್ಯರು ಹೇಳುತ್ತಾರೆ. ಬೆಳಗ್ಗೆ ಎದ್ದ ಹಾಗೆ ಟೀ ಕುಡಿಯೋದರಿಂದ ಆ ಕ್ಷಣಕ್ಕೆ ನಿದ್ದೆ ಮೂಡಿನಿಂದ ಹೊರಬಂದ ಅನುಭವವಾಗಬಹುದು. ಆದರೆ ದೇಹಕ್ಕೆ ಇದರಿಂದ ಹಾನಿಯಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಹಲವಿವೆ. ಟೀಯಲ್ಲಿರುವ ಥಿಯೋಫಿಲಿನ್ ದೇಹದಲ್ಲಿ ನಿರ್ಜಲೀಕರಣ, ಕಾಂಸ್ಟಿಪೇಶನ್ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತೆ.
ವ್ಯಾಯಾಮ ಮಾಡಿ ಟೀ ಸೇವನೆ ಮಾಡಿದ್ರೆ ಏನಾಗುತ್ತೆ?
ಬೆಳಗ್ಗೆ ಎದ್ದ ಹಾಗೆ ವ್ಯಾಯಾಮ ವ್ಯಾಯಾಮದ ಬಳಿಕ ಹೊಟ್ಟೆ ಹಸಿದುಕೊಂಡಿರುತ್ತೆ. ಈ ಹೊತ್ತಿಗೆ ಟೀ ಕುಡಿಯೋದು ಒಳ್ಳೆಯದಲ್ವೇ ಅಲ್ಲ. ಜೊತೆಗೆ ಖಾಲಿ ಹೊಟ್ಟೆಗೆ ಟೀ ಬಿದ್ದಾಗ ದೇಹದ ಉಷ್ಣತೆಯಲ್ಲಿ ಕೊಂಚ ಏರು ಪೇರಾಗುತ್ತದೆ. ಅಧಿಕ ರಕ್ತದೊತ್ತಡ ಅಥವಾ ಹೃದಯ ವೈಫಲ್ಯದಂತಹ ಹೃದಯ ಸಮಸ್ಯೆಗಳಿದ್ದರೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು.
ನಿದ್ರಾಹೀನತೆ
ಸಂಜೆ ಮೇಲೆ ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಮಾಡೋದರಿಂದ ನಿದ್ರಾ ಹೀನತೆ ಆವರಿಸಬಹುದು. ರಾತ್ರಿಯಿಡೀ ನೀವು ನಿದ್ದೆಯಿಲ್ಲದೆ ಒದ್ದಾಡುವಂತಾಗಬಹುದು. ಇದು ಮರುದಿನದ ನಿಮ್ಮ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ನಿದ್ರಾಹೀನತೆಯಿಂದ ಸುಸ್ತು, ಒತ್ತಡ ಉಂಟಾಗಬಹುದು. ಇದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹೊಟ್ಟೆ ಉಬ್ಬರಿಸಿದ ಹಾಗೆ, ಆಹಾರದಲ್ಲಿ ರುಚಿ ಕಡಿಮೆ ಆದ ಹಾಗೆಲ್ಲ ಆಗಬಹುದು.
ತಲೆನೋವು
ಟೀಯಲ್ಲಿರುವ ಕೆಫಿನ್ನಿಂದ ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ತಲೆನೋವು ಬರಬಹುದು. ಟೀ ಪುಡಿ ತಯಾರಿಕೆಗೆ ಬಳಸುವ ಕೆಲವೊಂದು ಅಂಶಗಳಿಂದ ಮೈಗ್ರೇನ್ ಬರುವ ಸಾಧ್ಯತೆಯೂ ಇದೆ. ಕೆಲವರು ತಲೆನೋವು ಕಡಿಮೆ ಆಗಲಿ ಅಂತಲೇ ಟೀ ಕುಡಿಯೋರಿದ್ದಾರೆ. ಅವರಿದ್ದನ್ನು ಗಮನಿಸಬೇಕು.
ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟ್ರಿಕ್
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸುವ ಮತ್ತೊಂದು ಅಡ್ಡ ಪರಿಣಾಮವೆಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಎದುರಾಗಲಿದೆ. ಹೊಟ್ಟೆ ಉಬ್ಬರಿಸಿದಂತಾಗುವುದು, ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡ ಫೀಲ್ಆಗಬಹುದು. ಆಹಾರವನ್ನು ತಿನ್ನುವ ಮೊದಲು ಬಿಸಿ ಟೀಯನ್ನು ಸೇವಿಸಿದಾಗ, ಅದು ನಿಮ್ಮ ಹೊಟ್ಟೆಯನ್ನು ಹಿಗ್ಗಿಸುತ್ತದೆ. ಈ ಪ್ರಕ್ರಿಯೆಯು ನಿಮ್ಮ ಜೀರ್ಣಾಂಗ ವ್ಯವಸ್ಥೆಯೊಳಗೆ ಒತ್ತಡವನ್ನು ಹೆಚ್ಚಿಸುತ್ತದೆ, ಇದು ಹೊಟ್ಟೆ ಉಬ್ಬರಿಸಿದ ಹಾಗಾಗೋದು, ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ.
ತಲೆ ತಿರುಗುವಿಕೆ
ಕೆಫೀನ್ ಕೆಲವು ಜನರಲ್ಲಿ ತಲೆತಿರುಗುವಿಕೆಯನ್ನು ಉಂಟುಮಾಡುತ್ತದೆ. ಇದು ನಿರ್ಜಲೀಕರಣ ಅಥವಾ ನಿರ್ಜಲೀಕರಣದ ಕಾರಣದಿಂದಾಗಿರಬಹುದು ಅಥವಾ ಈ ಕ್ಷಣದಲ್ಲಿ ನಾವು ಗುರುತಿಸಲಾಗದ ಇತರ ಕಾರಣಗಳಿಂದಾಗಿರಬಹುದು.
ಅನಿಯಮಿತ ಹೃದಯ ಬಡಿತ
ಕೆಫೀನ್ ಕೆಲವು ಜನರಲ್ಲಿ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಈ ಅಸಹಜ ಹೃದಯ ಬಡಿತವು ಆತಂಕ ಹೆಚ್ಚು ಮಾಡಬಹುದು. ನೀವು ಆರೋಗ್ಯವಾಗಿರಲು ಬಯಸಿದರೆ, ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಖಾಲಿ ಹೊಟ್ಟೆಯ ಚಹಾವನ್ನು ತಪ್ಪಿಸುವುದು ಮುಖ್ಯ.