ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲವರಿಗೆ ಮುಖ ಮೈ, ಕೈ, ಸೊಂಟ, ಹೊಟ್ಟೆ ಎಲ್ಲೆಲ್ಲೋ ತುರಿಕೆ ಉಂಟಾಗುತ್ತದೆ. ಇದನ್ನು ಸಾಮಾನ್ಯ ಎಂಬಂತೆ ಕೆಲವರು ನೆಗ್ ಲೇಟ್ ಮಾಡುತ್ತಾರೆ. ಅದರ ಕಡೆ ಹೆಚ್ಚಿನ ಗಮನವನ್ನು ಕೊಡಲು ಹೋಗುವುದಿಲ್ಲ. ಆದರೆ ಇದು ಕೆಲವೊಮ್ಮೆ ತೀವ್ರವಾದ ರೋಗಗಳಿಗೂ ಕಾರಣವಾಗುವ ಸಾಧ್ಯತೆ ಇರುತ್ತದೆ.
BIGG NEWS : ಸಾರ್ವಜನಿಕರಿಗೆ ಗುಡ್ ನ್ಯೂಸ್ ; ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತಷ್ಟು ಇಳಿಕೆ |Edible Oil Price
ನವೆಯಾಗಿ ಕೆಲವೊಮ್ಮೆ ಕೆಂಪಗಿನ ಎಳೆಗಳು, ಗುಳ್ಳೆಗಳು ಮೂಡಬಹುದು. ಈ ಸಮಸ್ಯೆಯನ್ನು ಎಲ್ಲರೂ ಒಂದಿಲ್ಲೊಂದು ಬಾರಿ ಅನುಭವಿಸುತ್ತಾರೆ. ಅಷ್ಟು ಸಾಮಾನ್ಯ ತೊಂದರೆ ಇದು. ಇದಕ್ಕೆ ಕಾರಣಗಳು ಹಲವು. ಕೆಲವೊಮ್ಮೆ ಚರ್ಮದ ಈ ಲಕ್ಷಣ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ತೋರಬಹುದು. ಶುಷ್ಕ ಚರ್ಮ ಮತ್ತು ತುರಿಕೆ ಕಂಡುಬರುವುದು ಮಳೆಯ ಸಮಯದಲ್ಲಿ ಸಾಮಾನ್ಯ. ಹವಾಮಾನ ನಿರಂತರವಾಗಿ ಬದಲಾಗುತ್ತಿರುತ್ತದೆ. ಇದರಿಂದ ಸಾಕಷ್ಟು ಜನ ಚರ್ಮ ಒಣಗುವ ಸಮಸ್ಯೆ ಎದುರಿಸುತ್ತಾರೆ. ಆದರೆ, ನಿರಂತರವಾಗಿ ಈ ತೊಂದರೆ ಕಂಡುಬಂದರೆ ಎಚ್ಚೆತ್ತುಕೊಳ್ಳಬೇಕು.
ಚರ್ಮಕ್ಕೆ ಸಂಬಂಧಿಸಿದ ಸೋಂಕು, ಚರ್ಮದ ಬಣ್ಣ ಬದಲಾಗುವುದು, ಅತಿಯಾದ ತುರಿಕೆ ಇವೆಲ್ಲವೂ ಮಧುಮೇಹ, ಕಿಡ್ನಿ, ಥೈರಾಯ್ಡ್ ಅಥವಾ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಲಕ್ಷಣವಾಗಿರಬಹುದು. ಹೀಗಾಗಿ, ಚರ್ಮಕ್ಕೆ ಸಂಬಂಧಿಸಿದ ಮೇಲಿನ ಯಾವುದೇ ತೊಂದರೆ ಎರಡು ವಾರಗಳಿಗಿಂತ ಹೆಚ್ಚು ಸಮಯ ಕಂಡುಬಂದರೆ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು ಮುಖ್ಯ. ತುರಿಕೆ ಮತ್ತು ನವೆಯಾಗುವ ಸಮಸ್ಯೆಗೆ ಈ ಕೆಳಗಿನ ಹಲವಾರು ಕಾರಣಗಳಿರಬಹುದು.
ತಜ್ಞರ ಪ್ರಕಾರ, ಚರ್ಮದಲ್ಲಿ ನಿರಂತರವಾಗಿ ಕಂಡುಬರುವ ತುರಿಕೆಯಿಂದ ನಿದ್ರೆಯ ಸಮಸ್ಯೆ ಉಂಟಾಗಬಹುದು. ಇದರಿಂದಾಗಿ ವ್ಯಕ್ತಿಯಲ್ಲಿ ಆತಂಕ ಮತ್ತು ಖಿನ್ನತೆಯ ಸಮಸ್ಯೆ ಸೃಷ್ಟಿಯಾಗಬಹುದು. ಹಾಗೂ ಇದರಿಂದಾಗಿ ದೈನಂದಿನ ಕೆಲಸಕಾರ್ಯಗಳಿಗೆ ಧಕ್ಕೆ ಉಂಟಾಗಬಹುದು.
ಚರ್ಮದ ಸೋಂಕು
ಚರ್ಮದ ಯಾವಾಗ ಶುಷ್ಕವಾಗುತ್ತದೆಯೋ ಆಗ ತುರಿಕೆ ಅಧಿಕವಾಗುತ್ತದೆ. ಪದೇ ಪದೆ ಹೀಗಾಗುತ್ತಿದ್ದರೆ ಚರ್ಮವು ನಿಧಾನವಾಗಿ ಒರಟಾಗುತ್ತದೆ ಹಾಗೂ ವಯಸ್ಸಾದಂತೆ ಕಂಡುಬರುತ್ತದೆ. ಚರ್ಮದ ಮೇಲೆ ಸುಕ್ಕುಗಳಾಗುತ್ತವೆ. ಇದರಿಂದಾಗಿ ಬ್ಯಾಕ್ಟೀರಿಯಾಸೋಂಕು ಮತ್ತು ಚರ್ಮದ ಬಣ್ಣ ಬದಲಾಗುವ ಸಮಸ್ಯೆಯನ್ನೂ ಅನುಭವಿಸಬೇಕಾಗಿ ಬರಬಹುದು.
ದೀರ್ಘಕಾಲಿಕ ರೋಗ
ಚರ್ಮದ ತುರಿಕೆಯು ಥೈರಾಯ್ಡ್, ಮಧುಮೇಹ, ಕಿಡ್ನಿ, ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳ ಲಕ್ಷಣವಾಗಿರಬಹುದು. ಇವುಗಳಿಂದಾಗಿ ಚರ್ಮ ಶುಷ್ಕವಾಗುತ್ತದೆ. ಧೂಮಪಾನ ಮಾಡುವವರ ಚರ್ಮ ನವೆಯಾಗುವುದು ಹೆಚ್ಚು. ಹಾಗೆಯೇ ಇವರ ಚರ್ಮ ಬೇಗ ಶುಷ್ಕವೂ ಆಗುತ್ತದೆ.
ಮಾನಸಿಕ ಸಮಸ್ಯೆಗಳು
ಆತಂಕ, ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ-OCD) ಮತ್ತು ಖಿನ್ನತೆಯ ಕಾರಣದಿಂದಲೂ ಚರ್ಮದಲ್ಲಿ ಶುಷ್ಕತೆ ಹೆಚ್ಚುತ್ತದೆ. ಕೆಲವು ಬಾರಿ ನರಗಳ ಸಮಸ್ಯೆಯಿಂದ ಮಲ್ಟಿಪಲ್ ಸ್ಕೆಲೆರೋಸಿಸ್, ಸರ್ಪಸುತ್ತು ಉಂಟಾದಾಗಲೂ ಶುಷ್ಕ ಚರ್ಮದ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು.
ವಯಸ್ಸು ಮತ್ತು ಆನುವಂಶಿಕತೆ
ಶುಷ್ಕ ಮತ್ತು ನವೆಯುಳ್ಳ ಚರ್ಮಕ್ಕೆ ವಯಸ್ಸಾಗುವಿಕೆಯೂ ಕಾರಣವಾಗುತ್ತದೆ. ಸಾಮಾನ್ಯವಾಗಿ 25 ವರ್ಷದವರೆಗೆ ಈ ಸಮಸ್ಯೆ ಕಾಣುವುದಿಲ್ಲ. ಅಲ್ಲದೆ, ಆನುವಂಶಿಕ ಕಾರಣವೂ ಇರಬಹುದು. ಹಾಗೆಯೇ, ಬದಲಾಗುತ್ತಿರುವ ಹವಾಮಾನದಿಂದ ಶುಷ್ಕ ಚರ್ಮ ಉಂಟಾಗುತ್ತದೆ.
ಚರ್ಮದ ಶುಷ್ಕತೆ ನಿವಾರಣೆಗೆ ಸಲಹೆಗಳು
- ನೀವು ಅಧಿಕ ಸಮಯ ಸ್ನಾನ ಮಾಡುತ್ತೀರಾದರೆ ಆ ಅವಧಿಯನ್ನು ಕಡಿತಗೊಳಿಸಿ. ಹೆಚ್ಚು ಸಮಯ ಸ್ನಾನ ಮಾಡುವುದರಿಂದ ಚರ್ಮ ಶುಷ್ಕವಾಗುತ್ತದೆ. ಏಕೆಂದರೆ, ಚರ್ಮದಲ್ಲಿನ ನೈಸರ್ಗಿಕ ತೈಲದ ಅಂಶ ಕಡಿಮೆಯಾಗುತ್ತದೆ.
- ಚರ್ಮದ ಶುಷ್ಕತೆಗೆ ಪೆಟ್ರೋಲಿಯಂ ಜೆಲ್ಲಿಯನ್ನು ಬಳಕೆ ಮಾಡಬಹುದು. ಯಾವಾಗ ಚರ್ಮ ಶುಷ್ಕವೆನಿಸುತ್ತದೆಯೋ ಆಗ ಜೆಲ್ಲಿ ಬಳಕೆ ಮಾಡಬಹುದು.
- ಸ್ನಾನದ ಬಳಿಕ ಉತ್ತಮ ಮಾಯಿಶ್ಚರೈಸ್ ಕ್ರೀಮ್ ಬಳಕೆ ಮಾಡಬೇಕು.
- ಸ್ನಾನಕ್ಕೆ ಸೋಪು ಬಳಸಬಾರದು. ಸೋಪಿನಿಂದ ಚರ್ಮದ ಪಿಎಚ್ ಮಟ್ಟಕ್ಕೆ ತೊಂದರೆ ಮಾಡುತ್ತದೆ.
- ದೇಹ ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಿ. ಸಾಕಷ್ಟು ನೀರು, ದ್ರವ ಆಹಾರ ಸೇವನೆ ಮಾಡಬೇಕು.
BIGG NEWS : 6-10 ತಿಂಗಳಲ್ಲಿ ‘ಹೊಸ ಟೆಲಿಕಾಂ ಬಿಲ್’ ಜಾರಿ ; ಸಚಿವ ಅಶ್ವಿನಿ ವೈಷ್ಣವ್ |New Telecom Bill