ಶಿವಮೊಗ್ಗ : ಶಿವಮೊಗ್ಗದಲ್ಲಿ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪೊಲೀಸರು ಬಂಧಿತ ಶಾರಿಕ್ ಕಾರನ್ನು ಜಪ್ತಿ ಮಾಡಿದ್ದಾರೆ.
ತೀರ್ಥಹಳ್ಳಿ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸರು ಶಾರಿಕ್ ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.ಇನ್ನೊಂದು ಕಡೆ ಬಂಧಿತ ಯಾಸಿನ್ ಗೆ ಪಾಕ್ ನಂಟು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಯಾಸಿನ್ ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಬಗ್ಗೆ ಸರ್ಚ್ ಮಾಡಿದ್ದಾನೆ, ಹಾಗೂ ಆತ ಪಾಕಿಸ್ತಾನಕ್ಕೆ ಕೂಡ ಹೋಗಿ ಬಂದಿರುವ ಸಾಧ್ಯತೆ ಇದೆ ಎಂಬ ಮಾಹಿತಿಯಿದೆ. ಪಾಕಿಸ್ತಾನಕ್ಕೆ ಹೋಗಿದ್ದರೆ ಯಾವ ಸ್ಥಳ, ಯಾವ ುದ್ದೇಶಕ್ಕೆ ಹೋಗಿದ್ದಾನೆ ಎಂಬ ಬಗ್ಗೆ ಕೂಡ ಪೊಲೀಸರು ಇಂಚಿಂಚು ಮಾಹಿತಿ ಕಲೆಹಾಕುತ್ತಿದ್ದಾರೆ.
ಅದೇ ರೀತಿ ಶಂಕಿತ ಉಗ್ರರಾದ ಯಾಜ್, ಯಾಸಿನ್ ಮೊಬೈಲ್ ನಲ್ಲಿ 12 ಮೆಸೆಂಜರ್ ಆ್ಯಪ್ ಗಳು ಪತ್ತೆಯಾಗಿದ್ದು, ಇದರ ಮೂಲಕವೇ ಹೆಚ್ಚು ಸಂಪರ್ಕ ಸಾಧಿಸುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ಲಭ್ಯವಾಗಿದೆ.
ಮಲೆನಾಡಿದ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶಂಕಿತ ಉಗ್ರ ಜಬೀವುಲ್ಲಾಗೆ ಐಸಿಸ್ ಮಾತ್ರವಲ್ಲ ಲಷ್ಕರ್ ಇ ತೋಯ್ಬಾ ಉಗ್ರರ ನಂಟು ಕೂಡ ಇದೆ . ಶಿವಮೊಗ್ಗದಲ್ಲಿ ಪ್ರೇಮ್ಸಿಂಗ್ಗೆ ಚಾಕು ಚುಚ್ಚಿದ್ದ ಜಬೀವುಲ್ಲಾ ̤ ಬೆಳಗಾವಿಯಲ್ಲಿ ಜೈಲಿಗೆ ಹೋದಾಗ ಉಗ್ರರ ಸಂಪರ್ಕ ಹೊಂದಿದ್ದಾನೆ, ಜಬೀವುಲ್ಲಾ ಮೊಬೈಲ್ನಲ್ಲಿ ಮಾತುಕತೆ ಆಡಿಯೋ ಲಭ್ಯವಾಗಿದೆ ಎಂದು ಇತ್ತೀಚೆಗಷ್ಟೇ ಮಾಧ್ಯಮಗಳಿಗೆ ಅಲೋಕ್ ಕುಮಾರ್ ಮಾಹಿತಿ ನೀಡಿದ್ದರು. ರಾಜ್ಯದ ಹಲವು ಕಡೆ ಬಾಂಬ್ ಬ್ಲಾಸ್ಟ್ ಮಾಡೋದಕ್ಕೆ ಪ್ಲ್ಯಾನ್ ಮಾಡ್ತಿದ್ದರು. ಮೂವರು ಶಂಕಿತ ಎ1 ಆರೋಪಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾರಿಖ್, ಎ-2 ಮಂಗಳೂರು ಮೂಲದ ಮಾಸ್, ಎಲೆಕ್ಟ್ರಿಕ್ ಇಂಜಿನಿಯರ್ ಆಗಿದ್ದ, ಜತೆಗೆ ಶಿವಮೊಗ್ಗ ಸಿದ್ದೇಶ್ವರ ನಗರದ ಎ-3 ಆರೋಪಿ ಯಾಸಿನ್ ಎಂದು ಗುರುತಿಸಲಾಗಿದೆ.
BREAKING NEWS : ಮೊದಲ ಹಂತದಲ್ಲಿ ರಾಜ್ಯದ 11 ಸಾವಿರ ಪೌರ ಕಾರ್ಮಿಕರ ಖಾಯಂ : ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ