ಕೊಯಮತ್ತೂರು(ತಮಿಳುನಾಡು): ತಮಿಳುನಾಡಿನ ಕೊಯಮತ್ತೂರಿನ ಬಿಜೆಪಿ ಕಚೇರಿ ಆವರಣ ಹಾಗೂ ವಾಣಿಜ್ಯ ಸಂಸ್ಥೆಯೊಂದರ ಮೇಲೆ ಗುರುವಾರ ರಾತ್ರಿ ಪೆಟ್ರೋಲ್ ಬಾಂಬ್ ಎಸೆದ ಘಟನೆ ನಡೆದಿದೆ. ಆದ್ರೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಎನ್ಐಎ ಅಧಿಕಾರಿಗಳು ನಿನ್ನೆ ಹಲವು ರಾಜ್ಯಗಳು ಸೇರಿದಂತೆ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿರುವ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿ, ಅನೇಕ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಘಟನೆ ನಡೆದಿದೆ.
Coimbatore, TN | Bottle filled with inflammable substance hurled at BJP office; BJP workers protest, police reaches spot (22.09) pic.twitter.com/mZ9DvjM51r
— ANI (@ANI) September 22, 2022
ಬಿಜೆಪಿ ಕಚೇರಿಯ ಮೇಲೆ ದಾಳಿ ನಡೆಸಿರುವ ದೃಶ್ಯಾವಳಿಗಳು ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲಿ ನಿಂತಿದ್ದ ಪಕ್ಷದ ಕಾರ್ಯಕರ್ತರು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಇದರ ಬೆನ್ನಲ್ಲೇ, ಮತ್ತೊಂದು ಹಿಂದೂ ಮುನ್ನಾನಿ ಕಾರ್ಯಕಾರಿ ಒಡೆತನದ ಸಗಟು ಬಟ್ಟೆ ಅಂಗಡಿಯ ಮೇಲೆ ಹೊತ್ತಿಸಿದ ಬಾಂಬ್ ಅನ್ನು ಎಸೆಯಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಮೇಲಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ, ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೊಯಮತ್ತೂರು ಪೊಲೀಸರು ಎರಡೂ ಘಟನೆಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BREAKING NEWS : ಇಂಡೋನೇಷ್ಯಾದಲ್ಲಿ 4.7 ತೀವ್ರತೆಯ ಭೂಕಂಪ | Earthquake in Indonesia
BIG NEWS : ʻಅಕ್ಕಿʼ ಬೆಲೆಯಲ್ಲಿ ಮತ್ತೆ ಏರಿಕೆ ಸಾಧ್ಯತೆ: ಆಹಾರ ಸಚಿವಾಲಯದಿಂದ ಮಾಹಿತಿ