ಬೆಂಗಳೂರು : ಎನ್ ಐ ಎ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಪಿಎಫ್ಐ ಸಂಘಟನೆಯ ಶಾಹೀದ್ ಖಾನ್ ನಿವಾಸದಲ್ಲಿಹಣ, ಮೊಬೈಲ್ ಜಪ್ತಿ ಮಾಡಲಾಗಿದೆ.
ಬಂಧಿತನಿಂದ 22 ಲಕ್ಷಕ್ಕೂ ಹೆಚ್ಚು ಹಣ ಹಾಗೂ ಏಳು ಮೊಬೈಲ್ ಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಏಳು ಫೋನ್ ಗಳಲ್ಲಿ 5 ಕೀಪ್ಯಾಡ್ ಹಾಗೂ ಎರಡು ಸ್ಮಾರ್ಟ್ ಫೋನ್ ಗಳು ಪತ್ತೆಯಾಗಿದೆ. ಇನ್ನೂ ಆತನ ಬಳಿಯಿದ್ದ ಮೊಬೈಲ್ ನೋಡಿದತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಗಲಭೆಕೋರರಿಗೆ ಹಣ ವರ್ಗಾವಣೆ ಮಾಡಿರುವ ಆರೋಪ ಶಾಹೀದ್ ಮೇಲಿದ್ದು, ಆದ್ದರಿಂದ ಎನ್ ಐ ಎ ಅಧಿಕಾರಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ ವರೆಗೂ ಶಿವಮೊಗ್ಗದಲ್ಲೇ ಶಾಹೀದ್ ನನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದು, ನಂತರ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ. ಶಾಹೀದ್ ಜೊತೆ ಇನ್ನೂ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.