ದೆಹಲಿ : ಸ್ಪೈಸ್ಜೆಟ್ ಕಂಪನಿಯು ತನ್ನ ಕ್ಯಾಪ್ಟನ್ ಹಾಗೂ ಹಿರಿಯ ಫಸ್ಟ್ ಆಫೀಸರ್ಗಳ ವೇತನವನ್ನು ಸರಿಸುಮಾರು ಶೇಕಡ 20ರಷ್ಟು ಹೆಚ್ಚಿಸಿದೆ.
ಇದು ಅಕ್ಟೋಬರ್ನಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ ರೂಪಿಸಿರುವ ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಕಂಪನಿಯು ಮೊದಲ ಕಂತಿನ ನೆರವನ್ನು ಪಡೆದಿದೆ.
#NewsAlert | @flyspicejet announces a 20% salary hike for pilots from October, @sameerdixit16 brings us all the details- @DGCAIndia @AAI_Official #Aviation #SpiceJet pic.twitter.com/YdpVFJswjb
— ET NOW (@ETNOWlive) September 22, 2022
ಕಂಪನಿಯು ಒಟ್ಟು 80 ಪೈಲಟ್ಗಳನ್ನು ಮೂರು ತಿಂಗಳ ಅವಧಿಗೆ ವೇತನ ರಹಿತ ರಜೆಯ ಮೇಲೆ ಕಳುಹಿಸಿದೆ. ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಕಂಪನಿಯು ಒಟ್ಟು ಅಂದಾಜು ₹ 225 ಕೋಟಿ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.