ಕೆಎನ್ ಎನ್ ನ್ಯೂಸ್ ಡೆಸ್ಕ್ : ಲವಂಗ ಯಾರು ಮನೆಯಲ್ಲಿ ಇರುವುದಿಲ್ಲ ಹೇಳಿ. ಎಲ್ಲ ಮನೆಯಲ್ಲೂ ಇದ್ದೇ ಇರುತ್ತದೆ. ಮಸಾಲೆ ಪದಾರ್ಥಗಳಲ್ಲಿ ಲವಂಗವು ಒಂದು ಆಗಿದೆ. ಲವಂಗದ ಎಣ್ಣೆಯನ್ನು ನೋವು ನಿವಾರಣೆ, ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುತ್ತದೆ.
ಜೊತೆಗೆ ಉಸಿರಾಟದ ಸಮಸ್ಯೆಗೆ ಔಷಧಿ ತಯಾರಿಸುವ ಉದ್ದೇಶಕ್ಕಾಗಿ ಹೆಚ್ಚು ಬಳಸಲಾಗುತ್ತದೆ. ಲವಂಗ ಮರದ ಒಣಗಿದ ಹೂವಿನ ಮೊಗ್ಗುಗಳು, ಕಾಂಡ ಮತ್ತು ಎಲೆಗಳಂತಹ ವಿವಿಧ ಭಾಗಗಳನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.
ಇನ್ನು ಕೆಲವರಿಗಂತೂ ಬೆಳಗ್ಗೆ ಖಾಲಿ ಹೊಟ್ಟೆಗೆ ಲವಂಗವನ್ನು ಬಾಯಿಯಲ್ಲಿ ಹಾಕಿಕೊಳ್ಳತ್ತಾರೆ. ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ನೈಸರ್ಗಿಕ ವಸ್ತುವಾಗಿ ಲವಂಗವನ್ನು ಬಳಸಲಾಗುತ್ತದೆ. ಹಲವಾರು ಗುಣಲಕ್ಷಣಗಳಿರುವ ಇದನ್ನು, ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಅಗಿಯುವುದರಿಂದ ವಿವಿಧ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದರೊಂದಿಗೆ ನಿಮ್ಮ ಹಲ್ಲಿನ ಆರೋಗ್ಯ ಉತ್ತಮವಾಗುವುದು ಮಾತ್ರವಲ್ಲದೆ, ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಪ್ರಯೋಜನೆಗಳು ಇಲ್ಲಿವೆ.
*ಒಣಗಿದ ಲವಂಗ ಮೊಗ್ಗುಗಳು ಯಕೃತ್ತಿನ ಮೇಲೆ ರಕ್ಷಣಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಇದು ಹೊಸ ಕೋಶಗಳ ಬೆಳವಣಿಗೆ, ಯಕೃತ್ತಿನ ನಿರ್ವಿಶೀಕರಣವನ್ನು ಉತ್ತೇಜಿಸುವ ಮೂಲಕ ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
*ಒಂದು ಚಿಟಿಕೆ ಲವಂಗದ ಪುಡಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದ ಸಕ್ಕರೆಯ ನಿರ್ವಹಣೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
*ಖಾಲಿ ಹೊಟ್ಟೆಯಲ್ಲಿ ಲವಂಗ ಅಗಿಯುವುದರಿಂದ ನಂಜುನಿರೋಧಕ ಲಕ್ಷಣಗಳಿಂದ ಪ್ರಯೋಜನ ಪಡೆಯಬಹುದು.
* ನೋವು ನಿವಾರಕ ಗುಣಲಕ್ಷಣಗಳ ಜೊತೆಗೆ, ಇದು ಬಾಯಿಯ ಉರಿಯೂತ, ಪ್ಲೇಕ್, ಜಿಂಗೈವಿಟಿಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
*ಲವಂಗಗಳ ಹೆಚ್ಚಿನ ಸೇವನೆಯು ನಿಧಾನವಾದ ರಕ್ತ ಹೆಪ್ಪುಗಟ್ಟುವಿಕೆ, ಅತಿಸಾರ, ವಾಂತಿ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.