ನವದೆಹಲಿ : ಜುಲೈನಿಂದ 65 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರದ ನೌಕರರು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಸೆಪ್ಟೆಂಬರ್ 28ರಂದು ಅಂದರೆ ಮೂರನೇ ನವರಾತ್ರಿಯಂದು ಸರ್ಕಾರವು ಅದರಲ್ಲಿ ಶೇಕಡಾ 4ರಷ್ಟು ಹೆಚ್ಚಳವನ್ನ ಘೋಷಿಸಬಹುದು ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗುತ್ತಿದೆ. ಆದರೆ ಇದಕ್ಕೂ ಮುನ್ನ ಸರ್ಕಾರಿ ನೌಕರರಿಗೆ ಹಿನ್ನಡೆಯಾಗಿದೆ. 7ನೇ ವೇತನ ಆಯೋಗದ ಪ್ರಕಾರ ಬಡ್ತಿಗಾಗಿ ಕನಿಷ್ಠ ಸೇವಾ ಷರತ್ತುಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಕನಿಷ್ಠ ಸೇವಾ ಷರತ್ತುಗಳನ್ನ ಬದಲಿಸಲು ನಿರ್ಧಾರ
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಸೆ.20ರಂದು ಹೊರಡಿಸಿರುವ ಕಚೇರಿ ಜ್ಞಾಪಕ ಪತ್ರದಲ್ಲಿ ಬಡ್ತಿಗೆ ಕನಿಷ್ಠ ಸೇವಾ ಷರತ್ತುಗಳನ್ನ ಬದಲಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. 7ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಈ ಬದಲಾವಣೆ ಮಾಡಲಾಗುವುದು. ಸೂಕ್ತ ತಿದ್ದುಪಡಿಗಳನ್ನ ಮಾಡುವ ಮೂಲಕ ಬಡ್ತಿಗೆ ಅಗತ್ಯವಿರುವ ಬದಲಾವಣೆಗಳನ್ನ ನೇಮಕಾತಿ ನಿಯಮಗಳು/ಸೇವಾ ನಿಯಮಗಳಲ್ಲಿ ಅಳವಡಿಸಿಕೊಳ್ಳಬಹುದು ಎಂದು DoPT ಆಶಿಸಿದೆ.
ಇಷ್ಟು ವರ್ಷ ದುಡಿದ ಮೇಲೆ ಈಗ ಪ್ರಮೋಷನ್ ಆಗುತ್ತೆ!
ಇದಕ್ಕಾಗಿ, ಎಲ್ಲಾ ಸಚಿವಾಲಯಗಳು / ಇಲಾಖೆಗಳು ನಿಗದಿತ ಪ್ರಕ್ರಿಯೆಯನ್ನ ಅನುಸರಿಸಿ ನೇಮಕಾತಿ ನಿಯಮಗಳಲ್ಲಿ ಅಗತ್ಯ ಬದಲಾವಣೆಗಳನ್ನ ಮಾಡಲು ವಿನಂತಿಸಲಾಗಿದೆ. ತಿದ್ದುಪಡಿ ಮಾಡಿದ ನಿಯಮಗಳ ಪ್ರಕಾರ, ಹಂತ 1 ಮತ್ತು ಹಂತ 2 ಕ್ಕೆ ಮೂರು ವರ್ಷಗಳ ಸೇವೆಯನ್ನು ಹೊಂದಿರುವುದು ಅವಶ್ಯಕ. ಅದೇ ಸಮಯದಲ್ಲಿ, ಹಂತ 6 ರಿಂದ 11 ನೇ ಹಂತಕ್ಕೆ 12 ವರ್ಷಗಳ ಸೇವೆ ಅಗತ್ಯ. ಆದಾಗ್ಯೂ, ಹಂತ 7 ಮತ್ತು ಹಂತ 8 ಗೆ, ಕೇವಲ ಎರಡು ವರ್ಷಗಳ ಸೇವೆಯ ಅಗತ್ಯವಿದೆ. ಬದಲಾವಣೆಯ ನಂತರ ಹೊಸ ಸೇವಾ ನಿಯಮಗಳ ಕುರಿತು ಮಾಹಿತಿ ಮುಂದಿದೆ.
ಏಳನೇ ವೇತನ ಆಯೋಗದ ಅಡಿಯಲ್ಲಿ, ಮಾರ್ಚ್ 2022ರಲ್ಲಿ ಕೇಂದ್ರ ನೌಕರರ ಡಿಎಯನ್ನು ಹೆಚ್ಚಿಸಲಾಗಿದೆ. ಆಗ ಸರ್ಕಾರ ಅದನ್ನು ಶೇ.3ರಷ್ಟು ಹೆಚ್ಚಿಸಿತ್ತು, ಅದು ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿತ್ತು. ಆಗ ನೌಕರರಿಗೆ ಸರಕಾರದಿಂದ ಮೂರು ತಿಂಗಳ ಬಾಕಿ ವೇತನ ನೀಡಲಾಗಿತ್ತು. ಈಗ ಜುಲೈನಿಂದ ನೌಕರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಬಾಕಿ ಇದೆ. 4ರಷ್ಟು ಹೆಚ್ಚಳದ ಘೋಷಣೆಯನ್ನು ಸೆಪ್ಟೆಂಬರ್ 28ರಂದು ನಿರೀಕ್ಷಿಸಲಾಗಿದೆ.