ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆಯಿಂದ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಹೃದಯ, ಕ್ಯಾನ್ಸರ್, ಮಧುಮೇಹ ಮತ್ತು ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಕಾಯಿಲೆಗಳು 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಎರಡು ಸೆಕೆಂಡಿಗೆ ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುತ್ತವೆ. ಆ 10 ಸಾವುಗಳಲ್ಲಿ ಸುಮಾರು ಒಂಬತ್ತು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO)ಯ ವರದಿ ತಿಳಿಸಿದೆ.
ಪ್ರತಿ ವರ್ಷ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ 17 ಮಿಲಿಯನ್ ಜನರು ಸಾಂಕ್ರಾಮಿಕವಲ್ಲದ ರೋಗ (ಎನ್ಸಿಡಿ)ಗಳಿಂದ ಸಾಯುತ್ತಾರೆ. ಶೇಕಡಾ 86 ರಷ್ಟು ಇಂತಹ ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿರುವವರಾಗಿದ್ದಾರೆ” ಎಂದು ವರದಿ ಹೇಳಿದೆ.
“ಹೃದಯರಕ್ತನಾಳದ ಕಾಯಿಲೆಗಳು (ಹೃದಯರೋಗ ಮತ್ತು ಪಾರ್ಶ್ವವಾಯು), ಕ್ಯಾನ್ಸರ್, ಮಧುಮೇಹ ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಗಳು ಪ್ರಪಂಚದಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಸಾವುಗಳಿಗೆ ಕಾರಣವಾಗುತ್ತವೆ” ಎಂದು ವರದಿ ಹೇಳಿದೆ.
ಹೆಚ್ಚುತ್ತಿರುವ ಎನ್ಸಿಡಿಗಳ ಹಿಂದಿನ ಕಾರಣಗಳು ಸಾಮಾಜಿಕ, ಪರಿಸರ, ವಾಣಿಜ್ಯ ಮತ್ತು ಜೆನೆಟಿಕ್ ಎಂದು WHO ವರದಿಯಲ್ಲಿ ಉಲ್ಲೇಖಿಸಿದೆ. ಆದಾಗ್ಯೂ, ಆರು ಸಾವುಗಳಲ್ಲಿ ಒಂದು ಅಂದರೆ 9.3 ಮಿಲಿಯನ್ ಕುಟುಂಬಗಳು ಪ್ರತಿ ವರ್ಷ ಕ್ಯಾನ್ಸರ್ ನಿಂದ ಸಾಯುತ್ತಿವೆ ಎಂದು ಹೇಳಿದೆ.
ಅಂಚೆ ಮತಪತ್ರಕ್ಕೆ ಚುನಾವಣಾ ಆಯೋಗದಿಂದ ಸಂಪೂರ್ಣ ಗೇಟ್ಪಾಸ್…?! ಚುನಾವಣಾ ಆಯೋಗದಿಂದ ಪ್ರಸ್ತಾವ
BREAKING NEWS : ‘ಎಬಿಜಿ’ ವಂಚನೆ ಪ್ರಕರಣ ; ‘ಇಡಿ’ಯಿಂದ 2,747 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು