ನವದೆಹಲಿ : ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) 2,747.69 ಕೋಟಿ ರೂ.ಗಳ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿದೆ.
ಇವುಗಳಲ್ಲಿ ಗುಜರಾತಿನ ಸೂರತ್ ಮತ್ತು ದಹೇಜ್’ನಲ್ಲಿರುವ ಹಡಗುಕಟ್ಟೆಗಳು, ಕೃಷಿ ಭೂಮಿಗಳು ಮತ್ತು ಪ್ಲಾಟ್’ಗಳು ಮತ್ತು ಗುಜರಾತ್ ಮತ್ತು ಮಹಾರಾಷ್ಟ್ರದ ವಿವಿಧ ವಾಣಿಜ್ಯ ಮತ್ತು ವಸತಿ ಆವರಣಗಳು ಸೇರಿವೆ.
22,842 ಕೋಟಿ ರೂ.ಗೂ ಹೆಚ್ಚು ಮೊತ್ತದ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ನ ಸ್ಥಾಪಕ ರಿಷಿ ಕಮಲೇಶ್ ಅಗರ್ವಾಲ್ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.