ಬೆಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮುಂಜಾನೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿವಿಧೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಎಸ್ಡಿಪಿಐ ಕಚೇರಿಗಳು ಹಾಗೂ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
BIGG NEWS: ರಾಜ್ಯ ಸರ್ಕಾರ ಸಂಘಟನೆ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು; ಎಂ.ಬಿ ಪಾಟೀಲ್
ಇಂದು ಮುಂಜಾನೆ ಕರ್ನಾಟಕದ ಬೆಂಗಳೂರು, ಮಂಗಳೂರು ಸೇರಿದಂತೆ ಕೇರಳ, ತಮಿಳುನಾಡು, ಬಿಹಾರ, ದೆಹಲಿ ಹಲವು ರಾಜ್ಯಗಳಲ್ಲಿ ಎನ್ ಐ ಎ ಅಧಿಕಾರಿಗಳು ದಾಳೀ ನಡೆಸಿದ್ದು, ದಾಳಿಯಲ್ಲಿ ಒಟ್ಟು 106 ಪಿಎಫ್ ಐ ಕಾರ್ಯಕರ್ತರ ಬಂಧನ ಮಾಡಲಾಗಿದೆ.
BIG NEWS: ಭಾರೀ ಮಳೆಯಿಂದಾಗಿ ಗೋಡೆ ಕುಸಿದು ಘೋರ ದುರಂತ: ಉತ್ತರ ಪ್ರದೇಶದಲ್ಲಿ ನಾಲ್ವರು ಮಕ್ಕಳ ಸಾವು
11 ರಾಜ್ಯಗಳಲ್ಲಿ ಎನ್ ಐಎ ಮತ್ತು ಇಡಿ ಮತ್ತು ರಾಜ್ಯ ಪೊಲೀಸರ ಜಂಟಿ ತಂಡವು ನಡೆಸಿದ ದಾಳಿಗಳಲ್ಲಿ ಒಟ್ಟು 106 ಪಿಎಫ್ ಐ ಸದಸ್ಯರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಕರ್ನಾಟಕ (20), ಕೇರಳ (22) , ಮಧ್ಯಪ್ರದೇಶ (4), ಮಹಾರಾಷ್ಟ್ರ (20), ಪುದುಚೇರಿ (3), ರಾಜಸ್ಥಾನ (2), ಟಿಎನ್ (10) ಮತ್ತು ಯುಪಿ (8) ಜನರನ್ನು ಬಂಧನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.