ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಾಳಿ ನಡೆಸಿದೆ. ಜಿಲ್ಲೆಯಲ್ಲಿರುವ ಪಿಎಫ್ಐ ಸಂಘಟನೆಯ ನಾಯಕ ಮನೆಗಳ ಮೇಲೆ NIA ಹಾಗೂ ED ಅಧಿಕಾರಿಗಳು ದಾಳಿ ನಡೆಸಿದೆ. ಈ ವೇಳೆ ಕೆಲ ಮುಖಂಡರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಸುಮಾರು 20 ಕಾರ್ಯಕರ್ತರನ್ನು ಎನ್ಐಎ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.
BIGG NEWS: ರಾಜ್ಯ ಸರ್ಕಾರ ಸಂಘಟನೆ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು; ಎಂ.ಬಿ ಪಾಟೀಲ್
ಕರ್ನಾಟಕದಲ್ಲಿ ಎಲ್ಲಿಲ್ಲೆ ದಾಳಿ?
ಕರ್ನಾಟಕದಲ್ಲಿ ಬೆಂಗಳೂರು, ಶಿವಮೊಗ್ಗ, ಮಂಗಳೂರು. ಉತ್ತರಕನ್ನಡ, ಕೊಪ್ಪಳ ಹಾಗೂ ಮೈಸೂರು , ಕಲಬುರಗಿ ಜಿಲ್ಲೆಗಳಲ್ಲಿ ಎನ್ ಐಎ ದಾಳಿ ನಡೆದಿದೆ.
ಪಿಎಫ್ಐ ಸಂಘಟನೆ ಹಾಗೂ ಎಸ್ ಡಿಪಿಐ ಸಂಘಟನೆಗಳ ಮುಖಂಡರು, ಕಚೇರಿಗಳು ಸೇರಿದಂತೆ ಒಟ್ಟು 12 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ, ರಾಜ್ಯದಲ್ಲಿ ಒಟ್ಟು 20ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು
ಬೆಂಗಳೂರಿನಲ್ಲಿ ಪಾದರಾಯನ ಪುರ, ರಿಚ್ ಮಂಡ್ ಟೌನ್, ಫ್ರೇಜರ್ ಟೌನ್ ನಲ್ಲಿರುವ ಪಿಎಫ್ಐ ಕಚೇರಿ ಅಥವಾ ಮುಖಂಡರ ಮನೆಗಳ ಮೇಲೆ ಎನ್ ಐಎ
ದಾಳಿ ನಡೆಸಲಾಗಿದೆ. ಪಾದರಾಯನ ಪುರದಲ್ಲಿ ಪಿಎಫ್ಐ ಮುಖಂಡ ಅಫ್ಸರ್ ಪಾಷಾ, ರಿಚ್ ಮಂಡ್ ಟೌನ್ ನಲ್ಲಿ ಮೊಹಮ್ಮದ್ ಸಾಕೀಬ್, ಫ್ರೇಜರ್ ಟೌನ್ ನಲ್ಲಿರುವ ಪಿಎಫ್ಐ ಕಚೇರಿಯ ಮೇಲೆ ದಾಳಿ ನಡೆಸಿದ್ದು, ಮುಖಂಡರನ್ನು ವಶಕ್ಕೆ ಪಡೆದು ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ.
BIGG NEWS: ರಾಜ್ಯ ಸರ್ಕಾರ ಸಂಘಟನೆ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು; ಎಂ.ಬಿ ಪಾಟೀಲ್
ಕಲಬುರಗಿ
ಕಲಬುರಗಿಯಲ್ಲೂ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಕಲಬುರಗಿ ಜಿಲ್ಲಾ ಪಿಎಫ್ ಐ ಅಧ್ಯಕ್ಷ ಶೇಕ್ ಎಜಾಜ್ ಅಹ್ಮದ್ ಹಾಗೂ ಶಾಹೀದ್ ನಸೀರ್ ನನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆನಂತರ, ಪಿಎಫ್ಐ ಸಂಘಟನೆಯ ಖಜಾಂಚಿ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಅಧಿಕಾರಿಗಳ ಕಾರ್ಯಾಚರಣೆ ಸಂದರ್ಭದಲ್ಲಿ ಪಿಫ್ಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯ ಮಧ್ಯೆಯೂ ಹುಸೇನ್ ಅವರನ್ನು ಪೊಲೀಸರು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಇದೇ ವೇಳೆ, ಪಿಎಫ್ಐ ರಾಜ್ಯ ಸಂಚಾಲಕ ಶಾಹಿದ್ ನಾಸಿರ್ ನಾಪತ್ತೆಯಾಗಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ.
ಉತ್ತರಕನ್ನಡ
ಶಿರಸಿಯಲ್ಲೂ ಕೂಡ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಎಸ್ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳೀಯ ಪೊಲೀಸರು ಅಧಿಕಾರಿಗಳು, ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿದ್ದರು.
ಮುಂಜಾನೆ 3.30ರಿಂದಲೇ ಅಬ್ದುಲ್ ಮನೆಯ ಬಳಿ ಪೊಲೀಸರ ದಂಡೇ ನೆರೆದಿತ್ತು. ಸುಮಾರು 6 ಗಂಟೆಯ ವೇಳೆಗೆ ಈತನ ಮನೆಗೆ ಅಧಿಕಾರಿಗಳು ತೆರಳಿದ್ದು ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕಗಳು ಹಾಗೂ ಒಂದು ಸಿಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಶಿವಮೊಗ್ಗ
ಶಿವಮೊಗ್ಗದಲ್ಲೂ ಸಹ ಎನ್ಐಎ ಅಧಿಕಾರಿಗಳು ನಡೆಸಿದ್ದಾರೆ. ಜಿಲ್ಲೆಯ ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ ಶಾಹೀದ್ ಖಾನ್ ಮನೆ ಮೇಲೆ ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಯಲಕಪ್ಪನ ಬೀದಿಯಲ್ಲಿನ ಶಾಹೀದ್ ನಿವಾಸದ ಮೇಲೆ ಇಂದು ಬೆಳಗಿನ ಜಾವ 2 ಗಂಟೆ ವೇಳೆಗೆ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಪರಿಶೀಲನೆ ಮುಗಿಸಿ, ಶಾಹೀದ್ ಖಾನ್ ವಶಕ್ಕೆ ಪಡೆದು ಕರೆದೊಯ್ಯಲಾಗಿದೆ.
BIGG NEWS: ರಾಜ್ಯ ಸರ್ಕಾರ ಸಂಘಟನೆ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು; ಎಂ.ಬಿ ಪಾಟೀಲ್
ಮೈಸೂರು
ಅರಮನೆ ನಗರಿ ಮೈಸೂರಿನಲ್ಲೂ ಸಹ ಎನ್ ಐಎ ದಾಳಿ ನಡೆಸಿದೆ . ಇಲ್ಲಿನ ಪಿಎಫ್ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಕಲಿಮುಲ್ಲಾ ನಿವಾಸದ ಮೇಲೆ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ಶಾಂತಿನಗರದಲ್ಲಿರುವ ಕಲಿಮುಲ್ಲಾ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಿಮುಲ್ಲಾ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಮುಂಜಾನೆ 3.30ರ ವೇಳೆಗೆ 8 ಜನ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ