ಸಿನಿಮಾಡೆಸ್ಕ್ : ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಗೆ ಡೇಟ್ ಫಿಕ್ಸ್ ಆಗಿದ್ದು, ಸೆಪ್ಟೆಂಬರ್ 24ಕ್ಕೆ ಬಿಸ್ ಬಾಸ್ 9 ಗ್ರ್ಯಾಂಡ್ ಪ್ರೀಮಿಯರ್ ಇದೆ. ಖಡಕ್ ಲುಕ್ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಶೋ ದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
ಈ ಸೀಸನ್ 9ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಓಟಿಟಿಯಲ್ಲಿ ಗಮನ ಸೆಳೆದ ದಿ ಬೆಸ್ಟ್ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ ನ ಟಿವಿ ಬಿಗ್ ಬಾಸ್ಗೆ ಬರೋದು ಪಕ್ಕಾ ಅಂತೆ.
ಅದೇ ರೀತಿ ಚಿತ್ರನಟಿ ಪ್ರೇಮಾ ಕೂಡ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದ ಕಾಫಿನಾಡು ಚಂದು ಬಿಗ್ ಬಾಸ್ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಮಲಿ’ ಸೀರಿಯಲ್ ನಟಿ ಅಮೂಲ್ಯ ಗೌಡ ಮತ್ತು ʻಮುದ್ದುಮಣಿಗಳುʼ ಖ್ಯಾತಿಯ ಸಮೀಕ್ಷಾ ಕೂಡ ಈ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರಂತೆ.
ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕ ಕಾಮತ್, ದಿವ್ಯ ವಸಂತ ಕೂಡ ಬಿಗ್ ಬಾಸ್ ಪ್ರವೇಶಿಸಲಿದ್ದಾರೆ. ಅದೇ ರೀತಿ ಮಜಾ ಭಾರತ ಶೋನ ಫೇಮಸ್ ಕಾಮಿಡಿಯನ್ ರಾಘವೇಂದ್ರ ಹಾಗೂ ಮಜಾಭಾರತದ ಚಂದ್ರಪ್ರಭ ಮತ್ತು ಸರಿಗಮಪ ಶೋನ ಗಾಯಕಿ ಆಶಾ ಭಟ್ ಕೂಡ ಇರಲಿದ್ದಾರೆ. ಸೆಪ್ಟೆಂಬರ್ 24ರಂದು ಸಂಜೆ 6ಕ್ಕೆ ಗ್ರ್ಯಾಂಡ್ ಲಾಂಚ್ನಲ್ಲಿ ಸ್ಪರ್ಧಿಗಳು ಯಾರೆಂದು ಅಧಿಕೃತವಾಗಿ ತಿಳಿಯಲಿದೆ.
ಸದ್ಯ, ಕಲರ್ಸ್ ಕನ್ನಡ ವಾಹಿನಿಯು ಹೊಸದೊಂದು ಪ್ರೋಮೋ ಸಖತ್ ಸೌಂಡ್ ಮಾಡುತ್ತಿದೆ. ಸೆಪ್ಟೆಂಬರ್ 24ರಂದು ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ಗ್ರ್ಯಾಂಡ್ ಓಪನಿಂಗ್ ಸಂಜೆ 6 ಗಂಟೆಗೆ ಶುರುವಾಗಲಿದೆ. ಈ ಶೋ ನಿತ್ಯ 9.30ಗೆ ಪ್ರಸಾರ ಆಗಲಿದೆ.
BREAKING NEWS: ಅಕ್ಟೋಬರ್ 29ರವರೆಗೆ ಸ್ಪೈಸ್ ಜೆಟ್ ನಿಷೇಧ ಅವಧಿ ವಿಸ್ತರಿಸಿದ DGCA