ಆಂಧ್ರಪ್ರದೇಶ: ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಆಕೆಯ ಪ್ರಿಯತಮನ ಮರ್ಮಾಂಗವನ್ನೇ ಕತ್ತರಿಸಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಇತ್ತೀಚೆಗೆ ಪ್ರಕಾಶಂ ಜಿಲ್ಲೆಯ ಕೊಂಡಪಿ ಮಂಡಲದ ಮುಗಚೆಂತಲದಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನೇ 55 ವರ್ಷದ ಮಹಿಳೆ ಕತ್ತರಿಸಿದ್ದಾಳೆ.
ವ್ಯಕ್ತಿಯನ್ನು ಖಾಸಗಿಯಾಗಿ ಬಂದು ಭೇಟಿಯಾಗುವಂತೆ ಹೇಳಿ ಈ ಕೃತ್ಯ ಎಸಗಿದ್ದಾಳೆ. ಇವರಿಬ್ಬರ ನಡುವೆ 10 ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ವ್ಯಕ್ತಿ ಮಹಿಳೆ ಮನೆಗೆ ಹೋದಾಗ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಮಹಿಳೆ ಬ್ಲೇಡ್ನಿಂದ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ.
ವ್ಯಕ್ತಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವನ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BIGG NEWS : ಪೋಕ್ಸೋ ಪ್ರಕರಣ : ಇಂದು ಮುರುಘಾಶ್ರೀಗಳ ಜಾಮೀನು ಅರ್ಜಿ ವಿಚಾರಣೆ : ಜೈಲಾ?ಬೇಲಾ?
ಒಂದೇ ದಿನಕ್ಕೆ ಬದಲಾದ ಅದೃಷ್ಟ: ಬಾಣಸಿಗನಾಗಲು ಹೊರಟ ಆಟೋರಿಕ್ಷಾ ಚಾಲಕನಿಗೆ ಲಾಟರಿ ಟಿಕೆಟ್ನಲ್ಲಿ ಸಿಗ್ತು 25 ಕೋಟಿ ರೂ.