ತಿರುವನಂತಪುರಂ: ಬಾಣಸಿಗನಾಗಿ ಕೆಲಸ ಮಾಡಲು ಮಲೇಷ್ಯಾಕ್ಕೆ ತೆರಳಲು ಮುಂದಾಗಿದ್ದ ಆಟೋ ರಿಕ್ಷಾ ಚಾಲಕನೊಬ್ಬ 3 ಲಕ್ಷ ರೂಪಾಯಿ ಸಾಲಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ಮರುದಿನವೇ ಕೇರಳದಲ್ಲಿ ಭಾನುವಾರ 25 ಕೋಟಿ ರೂಪಾಯಿ ಓಣಂ ಬಂಪರ್ ಲಾಟರಿ ಗೆದ್ದಿದ್ದಾರೆ.
ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ಇಲ್ಲಿನ ಶ್ರೀವರಾಹದಿಂದ ಬಂದಿರುವ ಅನೂಪ್ ಅವರು ಗೆಲ್ಲುವ ಟಿಕೆಟ್ ಟಿಜೆ 750605 ಅನ್ನು ಶನಿವಾರವಷ್ಟೇ ಖರೀದಿಸಿದ್ದರು.
ಸಾಲದ ಬಗ್ಗೆ ಮತ್ತು ತನ್ನ ಮಲೇಷ್ಯಾ ಪ್ರವಾಸದ ಬಗ್ಗೆ ಭಾವಪರವಶರಾದ ಅನೂಪ್, ಸಾಲದ ಬಗ್ಗೆ ಬ್ಯಾಂಕ್ಗೆ ಇಂದು ಕರೆ ಮಾಡಿ ತಿಳಿಸಿದ್ದೇನೆ. ಈ ಹಣದಲ್ಲೇ ಸಾಲ ತೀರಿಸುವೆ. ನಾನು ಮಲೇಷ್ಯಾಕ್ಕೆ ಹೋಗುವುದಿಲ್ಲ” ಎಂದು ಹೇಳಿದರು.
ಅನೂಪ್ ಕಳೆದ 22 ವರ್ಷಗಳಿಂದ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿದ್ದಾರೆ ಮತ್ತು ಈ ಹಿಂದೆ ಕೆಲವು ನೂರರಿಂದ ಗರಿಷ್ಠ 5,000 ರೂ.ವರೆಗೆ ಮೊತ್ತವನ್ನು ಗೆದ್ದಿದ್ದಾರೆ.
“ನಾನು ಈ ಲಾಟರಿ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಹಾಗಾಗಿ ನಾನು ಟಿವಿಯಲ್ಲಿ ಲಾಟರಿ ಫಲಿತಾಂಶಗಳನ್ನು ನೋಡುತ್ತಿರಲಿಲ್ಲ. ಆದರೆ, ನಾನು ನನ್ನ ಫೋನ್ ಪರಿಶೀಲಿಸಿದಾಗ ,ಲಾಟರಿ ಗೆದ್ದಿರುವುದು ತಿಳಿಯಿತು. ಮೊದಲಿಗೆ ನನಗೆ ನಂಬಲು ಸಾಧ್ಯವಾಗಲಿಲ್ಲ. ಅದನ್ನು ನನ್ನ ಹೆಂಡತಿಗೆ ತೋರಿಸಿದೆ. ಆಗ ಇದೇ ಲಾಟರಿ ಸಂಖ್ಯೆ ಎಂದು ಪತ್ನಿ ಖಚಿತಪಡಿಸಿದಳು. ಆದ್ರೂ, ಇದನ್ನು ನಾನು ನಂಬದೇ, ನಾನು ಲಾಟರಿ ಟಿಕೆಟ್ ಮಾರಾಟ ಮಾಡುವ ನನಗೆ ತಿಳಿದಿರುವ ಮಹಿಳೆಗೆ ಕರೆ ಮಾಡಿ ನನ್ನ ಟಿಕೆಟ್ನ ಫೋಟೋ ಕಳುಹಿಸಿದೆ. ಅವರೂ ಕೂಡ ಇದೇ ವಿನ್ನಿಂಗ್ ಲಾಟರಿ ಸಂಖ್ಯೆ ಎಂದು ಖಚಿತಪಡಿಸಿದರು” ಎಂದು ಅನೂಪ್ ಸಂತಸ ವ್ಯಕ್ತಪಡಿಸಿದರು.
ಇನ್ನೂ, ಗೆದ್ದಿರುವ 25 ಕೋಟಿ ರೂ.ಗಳ ಓಣಂ ಬಂಪರ್ ಲಾಟರಿಯಲ್ಲಿ ತೆರಿಗೆ ಕಡಿತಗೊಳಿಸಿ ಅನೂಪ್ ಅವರಿಗೆ 15 ಕೋಟಿ ರೂ. ಸಿಗಲಿದೆ.
BIGG NEWS : ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಇಂದು ಇ.ಡಿ. ವಿಚಾರಣೆಗೆ ಡಿ.ಕೆ.ಶಿವಕುಮಾರ್ ಹಾಜರು
Viral Video: ನಾಯಿಯನ್ನು ಕಾರಿಗೆ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದ ವೈದ್ಯ… ಪ್ರಾಣಿ ಪ್ರಿಯರಿಂದ ಆಕ್ರೋಶ ವ್ಯಕ್ತ