ಬಳ್ಳಾರಿ : ಸಿದ್ದರಾಮಯ್ಯನಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವ ಸ್ಥಿತಿ ನನಗೆ ಬಂದಿಲ್ಲ. ಯಾರೋ ಕಟ್ಟಿದ ಗೂಡಿನಲ್ಲಿ ಹೋಗಿ ರಾಜಕಾರಣ ಮಾಡುವ ಸ್ಥಿತಿ ನನ್ನದಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
BREAKING NEWS: ಚೀನಾದಲ್ಲಿ ಭೀಕರ ಅಪಘಾತ: ಬಸ್ ಪಲ್ಟಿಯಾಗಿ 27 ಮಂದಿ ಸಾವು, 20 ಜನರಿಗೆ ಗಾಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಳ್ಳು ಹೇಳಿ ರಾಜಕೀಯ ಮಾಡಿಕೊಂಡು ಬಂದಿಲ್ಲ. ನಾನು ಸುಳ್ಳು ಹೇಳಿ ರಾಜಕೀಯ ಮಾಡಿದ್ದರೆ ದೊಡ್ಡ ವ್ಯಕ್ತಿ ಆಗುತ್ತಿದೆ. ಸಿದ್ದಾಂತದ ಮೇಲೆ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
BIGG NEWS : ತೆಲಂಗಾಣದಲ್ಲಿ 40 ಪರ್ಸೆಂಟ್ ಬ್ಯಾನರ್ ಹಾಕಿದ ವಿಚಾರ : ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಇನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ವಿಮ್ಸ್ ಸಾವು ಪ್ರಕರಣ ವಿದ್ಯುತ್ ಸ್ಥಗಿತದಿಂದ ಆಗಿಲ್ಲ ಎಂಬುದು ಕಂಡು ಬರುತ್ತಿದ್ದು, ವೈದ್ಯಾಧಿಕಾರಿಗಳ ಸಭೆ ಕರೆದು ಮಾತನಾಡಿದ್ದೇನೆ. ವಿದ್ಯುತ್ ವ್ಯತ್ಯಯದಿಂದ ಯಾರೂ ಕೂಡ ಸಾವನ್ನಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.