ಬೆಂಗಳೂರು: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ಪ್ರವಾಸ ಇದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿನ ಮಹತ್ವದ ರೈಲ್ವೆ ಯೋಜನೆಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
BIGG NEWS: ಹುಡುಗಿ ಜೊತೆ ಅನುಚಿತ ವರ್ತನೆ; ಕಾಂಗ್ರೆಸ್ ಮುಖಂಡ ಅರೆಸ್ಟ್
ನಗರದಲ್ಲಿರುವ ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಕೇರಳ ಸಿಎಂ ಅವರನ್ನು ಬೊಮ್ಮಾಯಿ ಬರಮಾಡಿಕೊಂಡರು. ಈ ವೇಳೆ ಅವರಿಗೆ ಬೊಮ್ಮಾಯಿ ಅವರು ಗೌರವ ಸಲ್ಲಿಸಿ
ಉಭಯ ಕುಶಲೋಪರಿ ವಿಚಾರಿಸಿದರು.ನಂತರ ಕೆಲಕಾಲ ಎರಡೂ ರಾಜ್ಯಗಳ ಯೋಜನೆಗಳ ಕುರಿತು ಮಾತುಕತೆ ನಡೆಸಿದರು.
Had a fruitful meeting with Shri @pinarayivijayan, the Chief Minister of Kerala. Various issues of inter state and mutual interest were discussed. pic.twitter.com/NsbIxXHscQ
— Basavaraj S Bommai (@BSBommai) September 18, 2022
ತಲಶ್ಶೇರಿ–ಮೈಸೂರು ಹಾಗೂ ನಿಲಂಬೂರು–ನಂಜನಗೂಡು ರೈಲ್ವೆ ಯೋಜನೆಯ ಅನುಷ್ಠಾನದ ಕುರಿತು ಉಭಯ ನಾಯಕರಿಂದ ಚರ್ಚೆ ನಡೆದಿದೆ. ತಿರುವನಂತಪುರ–ಕಾಸರಗೋಡು ಸೆಮಿ ಹೈ–ಸ್ಪೀಡ್ ರೈಲು ಮಾರ್ಗ ಹಾಗೂ ಸಿಲ್ವರ್ ಮಾರ್ಗವನ್ನು ಮಂಗಳೂರಿನವರೆಗೂ ವಿಸ್ತರಿಸುವ ಸಂಬಂಧ ಕೇರಳ ಸರ್ಕಾರದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಸಂಬಂಧ ಚರ್ಚೆ ನಡೆದಿದೆ ಎನ್ನಲಾಗಿದೆ.