ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ( Mysore Dasara 2022 ) ಕಾರ್ಯಕ್ರಮಗಳ ಪಟ್ಟಿಯನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ( Minister S T Somashekhar ) ಬಿಡುಗಡೆ ಮಾಡಿದ್ದಾರೆ. ಅದ್ದೂರಿ ದಸರಾ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಭಿತ್ತಿಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದ್ದಾರೆ. ಅವರು ಬಿಡುಗಡೆ ಮಾಡಿರುವಂತೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ರ ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತಿದೆ.
ಸೆ.26ರಂದು ದಸರಾಗೆ ಚಾಲನೆ
ಸೆಪ್ಟೆಂಬರ್ 26ರಂದು ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ರಾಷ್ಟ್ರಪತಿಯವರು ದಸರಾ ಉದ್ಘಾಟನೆಗೆ ಆಗಮಿಸುತ್ತಿರುವುದರಿಂದ ಆಹ್ವಾನ ಪತ್ರಿಕೆಯಲ್ಲಿ ಮೊದಲ ದಿನದ ಕಾರ್ಯಕ್ರಮದ ವಿವರವನ್ನು ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲೂ ಮುದ್ರಿಸಲಾಗುತ್ತದೆ.
ಸೆಪ್ಟೆಂಬರ್ 23 ರಿಂದ 25 ರವರೆಗೆ 3 ದಿನಗಳ ಕಾಲ ರೈತ ದಸರಾ ಮತ್ತು ಗ್ರಾಮೀಣ ದಸರಾ ನಡೆಯಲಿದ್ದು, ಕೃಷಿ ಸಚಿವ ಬಿ ಸಿ ಪಾಟೀಲ್ ಹಾಗೂ ಪಶುಸಂಗೋಪನಾ ಸಚಿವರು ಭಾಗಿಯಾಗಲಿದ್ದಾರೆ.
ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 3 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣಗೊಳ್ಳಲಿದೆ. ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 900 ಕಲಾವಿದರು ಅರ್ಜಿ ಸಲ್ಲಿಸಿದ್ದು 280 ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ಸ್ಥಳೀಯ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಕಲಾವಿದರಿಗೆ ಆದ್ಯತೆ ನೀಡಲಾಗಿದೆ.
ಸೆ.27ರಿಂದ ಯುವ ದಸರಾ ಆರಂಭ
4 ದಿನಗಳ ಕಾಲ ನಡೆಯುವ ಕವಿಗೋಷ್ಠಿ ಸೆಪ್ಟೆಂಬರ್ 26ರಂದು ಉದ್ಘಾಟನೆ ಆಗಲಿದೆ. ಯೋಗ ದಸರಾ ಏಳು ದಿನಗಳ ಕಾಲ ನಡೆಯಲಿದೆ. ಆಹಾರ ಮೇಳ ಹತ್ತು ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್ 27 ರಂದು ಯುವ ದಸರಾ ಆರಂಭವಾಗಲಿದ್ದು ಒಟ್ಟು ಏಳು ದಿನಗಳ ಕಾಲ ನಡೆಯಲಿದೆ. ಯುವ ದಸರಾದಲ್ಲಿ ಒಂದು ದಿನ ಪವರ್ ಸ್ಟರ್ ಪುನಿತ್ ರಾಜಕುಮಾರ್ ಗೆ ಮೀಸಲಿಡಲಾಗಿದೆ.
BREAKING NEWS: SC/ST ಮಕ್ಕಳಿಗೆ ವೇದ ಗಣಿತ, ಸುತ್ತೋಲೆ ವಾಪಸ್ಸು | Vedic Maths withdrawn
ಸೆಪ್ಟೆಂಬರ್ 27 ರಿಂದ ಐದು ದಿನಗಳ ಕಾಲ ಮಹಿಳಾ ದಸರಾ ಅನಾವರಣಗೊಳಿಸಲಾಗುತ್ತಿದೆ. ಸೆಪ್ಟೆಂಬರ್ 29 ಮತ್ತು 30 ರಂದು ಮಕ್ಕಳ ದಸರಾ ನಡೆಯಲಿದೆ. ಸೆಪ್ಟೆಂಬರ್ 26 ರಿಂದ 29ರ ವರೆಗೆ ದಸರಾ ಕ್ರೀಡಾಕೂಟ ನಡೆಯಲಿದೆ. ಸೆಪ್ಟೆಂಬರ್ 26 ರಿಂದ ಆರಂಭವಾಗುವ ಚಲನಚಿತ್ರೋತ್ಸವ ಏಳು ದಿನಗಳ ಕಾಲ ನಡೆಯಲಿದೆ.
ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ 17 ಉಪ ಸಮಿತಿಗಳನ್ನು ರಚಿಸಲಾಗಿದೆ. ಉಪಸಮಿತಿಗಳಿಗೆ ಅಧಿಕಾರೇತರರನ್ನು ನೇಮಿಸಲು ಸಂಸದರು, ಶಾಸಕರು ಇದುವರೆಗೆ ಪಟ್ಟಿಯನ್ನು ನೀಡಿಲ್ಲ. ಸಂಸದರು, ಶಾಸಕರು ಪಟ್ಟಿ ನೀಡಿದರೆ ಉಪ ಸಮಿತಿಗಳಿಗೆ ಸದಸ್ಯರನ್ನು ನೇಮಿಸಲಾಗುವುದು. ಸಂಸದರು, ಶಾಸಕರು ಹೇಳಿದರೆ ಯಾರನ್ನು ಬೇಕಾದರೂ ದಸರಾ ಉಪ ಸಮಿತಿಗಳಿಗೆ ನೇಮಿಸಲಾಗಿದೆ.
ಹಾಸನಾಂಭೆ ದರ್ಶನೋತ್ಸವ ಸಂಪ್ರದಾಯ ಹಾಗೂ ಸಡಗರಕ್ಕೆ ಕೊರತೆಯಿಲ್ಲದಂತೆ ಆಚರಣೆಗೆ ಸಚಿವ ಕೆ.ಗೋಪಾಲಯ್ಯ ಸೂಚನೆ
ಯುವ ದಸರಾದಲ್ಲಿ ಒಂದು ದಿನ ಅಪ್ಪು ಹಾಡುಗಳಿಗೆ ಮೀಸಲು
ಸೆಪ್ಟೆಂಬರ್ 27 ರಿಂದ ಯುವದಸರಾ ಕಾರ್ಯಕ್ರಮ ಅನಾವರಣಗೊಳ್ಳಲಿದೆ. 7 ದಿನಗಳ ಕಾಲ ಯುವ ದಸರಾ ನಡೆಯಲಿದೆ. ಒಂದು ದಿನ ಅಪ್ಪು ಹಾಡಿಗೆ ಮೀಸಲಿಡಲಾಗಿದೆ. ಎಲ್ಲರ ಒತ್ತಾಯದ ಮೇರೆಗೆ ಅಪ್ಪು ನೆನಪಿಗಾಗಿ ಅಪ್ಪು ಹಾಡಿನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುವ ದಸರಾ ಉದ್ಘಾಟಕರು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ಕುರಿತು ಬರುವ ಸೋಮವಾರ ಅಂತಿಮ ಪಟ್ಟಿ ಸಿದ್ದವಾಗಲಿದೆ.
ಚಲನಚಿತ್ರೋತ್ಸವ ಕಾರ್ಯಕ್ರಮ ಪುನೀತ್ ರಾಜ್ ಕುಮಾರ್ ಪತ್ನಿ ಉದ್ಘಾಟನೆ
ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ. ಬೆಟ್ಟದ ಹೂ ಸಿನಿಮಾವನ್ನು ಶಕ್ತಿಧಾಮದ ಮಕ್ಕಳೊಂದಿಗೆ ನೋಡಲಿದ್ದಾರೆ. ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಯಾರು ಇರಬೇಕೆಂದು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಶಾಸಕರು, ಸಚಿವರಿಗೆ ಅವಕಾಶ ಕೊಡಬೇಕೆಂದು ರಾಷ್ಟ್ರಪತಿ ಕಛೇರಿಗೆ ಮಾಹಿತಿ ನೀಡಿದ್ದಾರೆ.
ದಸರಾ ಗೋಲ್ಡ್ ಪಾಸ್ ಗೂ ವ್ಯವಸ್ಥೆ
ಈ ಹಿಂದೆ 43 ಜನರು ವೇದಿಕೆಯಲ್ಲಿರುತ್ತಿದ್ದರು. ಈ ಬಾರಿ ಕೇವಲ 10 ಜನರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ಎನ್ನುತ್ತಿದ್ದಾರೆ. ದಸರಾ ಗೋಲ್ಡ್ ಕಾರ್ಡ್ ಕೊಡಬೇಕೆಂಬ ಒತ್ತಡ ಬಂದಿದೆ. ಅರಮನೆಯಲ್ಲಿ ದಸರಾ ವೀಕ್ಷಣೆ ಹಾಗೂ ಪಂಚಿನ ಕವಾಯತು ಮೈದಾನಕ್ಕೆ ಪಾಸ್ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಷ್ಟು ಪಾಸ್ ಕೊಡಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಜನಪ್ರತಿನಿಧಿಗಳು ಕೇಳಿದಷ್ಟು ಪಾಸ್ ಕೊಡಲ್ಲ
ದಸರಾ ಉದ್ಘಾಟನೆಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ಎರೆಡು ಸಾವಿರ ಜನರಿಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಈ ಬಾರಿಯ ದಸರಾ ಪಾಸ್ ನಲ್ಲಿ ಗೊಂದಲ ಆಗುವುದಿಲ್ಲ. ಎಂಎಲ್ಎ, ಎಂ ಎಲ್ ಸಿ, ಎಂಪಿ, ಪಾಲಿಕೆ ಸದಸ್ಯರಿಗೆ ಎಷ್ಟು ಪಾಸ್ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಅವರು ಕೇಳಿದಷ್ಟು ಪಾಸ್ ಕೊಡುವುದಿಲ್ಲ. ನನ್ನ ಕ್ಷೇತ್ರದ ಜನರಿಗೆ ಪಾಸ್ ಕೊಡುವುದಿಲ್ಲ. ನಾನು ಈಗಾಗಲೇ ನನ್ನ ಕ್ಷೇತ್ರದ ಜನರಿಗೆ ದಸರಾ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಗಳ ಪಾಸ್ ಕೇಳಬೇಡಿ ಎಂದು ಹೇಳಿದ್ದೇನೆ. ಹಿಂದೆ ಏನೆಲ್ಲಾ ಗೊಂದಲಗಳಾಗಿದೆ ಎಂಬುದು ನನಗೆ ತಿಳಿದಿದೆ. ಈ ವಿಚಾರದಲ್ಲಿ ನಾನು ತಪ್ಪಿತಸ್ಥನಾಗುವುದಿಲ್ಲ ಎಂದು ತಿಳಿಸಿದ್ದಾರೆ.