ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ( Mysore Dasara 2022 ) ಆರಂಭದ ಮುನ್ನವೇ ಈಗ ರಾಜ್ಯ ಸರ್ಕಾರದ ನಡೆ ವಿವಾದಕ್ಕೆ ಕಾರಣವಾಗಿದೆ. ಅದೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯವೆಂದ ಸರ್ಕಾರ, ಈಗ ಮೈಸೂರು ದಸರಾ ಆಹ್ವಾನ ಪತ್ರಿಕೆಯನ್ನೇ ಇಂಗ್ಲೀಷ್ ನಲ್ಲಿ ಮಾಡಲಾಗಿದೆ.
BREAKING NEWS: ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ FIR ದಾಖಲು
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು, ಈ ಬಾರಿ ದಸರಾ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯನ್ನು ಇಂಗ್ಲೀಷ್ ನಲ್ಲಿ ಮಾಡಿಸಲಾಗಿದೆ. ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸುತ್ತಿರೋ ಕಾರಣ, ಮೊದಲ ದಿನದ ಆಹ್ವಾನ ಪತ್ರಿಕೆ ಇಂಗ್ಲೀಷ್ ನಲ್ಲಿ ಮುದ್ರಣ ಮಾಡಲಾಗುತ್ತಿದೆ ಎಂದರು.
ಇನ್ನೂ ಮೈಸೂರು ದಸರಾ ಕಾರ್ಯಕ್ರಮಗಳ ಪಟ್ಟಿಯಲ್ಲಿ ರೈತ ಹಾಗೂ ಗ್ರಾಮೀಣ ದರಸಾವನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 23ಕ್ಕೆ ಆರಂಭಗೊಂಡು 25ಕ್ಕೆ ಅಂತ್ಯವಾಗಲಿದೆ. ಈ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ ಎಂದರು.
BREAKING NEWS: SC/ST ಮಕ್ಕಳಿಗೆ ವೇದ ಗಣಿತ, ಸುತ್ತೋಲೆ ವಾಪಸ್ಸು | Vedic Maths withdrawn
ಅಂದಹಾಗೇ ಈ ಬಾರಿ 10 ದಿನಗಳ ಕಾಲ ಆಹಾರ ಮೇಲೆ ನಡೆಯಲಿದೆ. 8 ದಿನಗಳ ಕಾಲ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸೆ.27ರಿಂದ ಯುವ ದಸರ ಆರಂಭಗೊಂಡು, 7 ದಿನಗಳ ಕಾಲ ನಡೆಯಲಿದೆ.
ಇದಲ್ಲದೇ ಸೆ.26ರಿಂದ ಯೋಗ ದಸರಾ ಆರಂಭವಾಗಿ, 7 ದಿನಗಳ ಕಾಲ ನಡೆಯಲಿದೆ. ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಅಪ್ಪು ನೆನಪಿಗಾಗಿ ಅವರ ಹಾಡುಗಳನ್ನು ಯುವ ದಸರಾ ಕಾರ್ಯಕ್ರಮದಲ್ಲಿ ಹಾಡಲಾಗುತ್ತಿದೆ ಎಂದರು.
ಹಾಸನಾಂಭೆ ದರ್ಶನೋತ್ಸವ ಸಂಪ್ರದಾಯ ಹಾಗೂ ಸಡಗರಕ್ಕೆ ಕೊರತೆಯಿಲ್ಲದಂತೆ ಆಚರಣೆಗೆ ಸಚಿವ ಕೆ.ಗೋಪಾಲಯ್ಯ ಸೂಚನೆ