ಮೈಸೂರು: ಮೈಸೂರು ದಸರಾ ಜಂಬೂಸವಾರಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪಾರ್ಚನೆಗೆ ಆಗಮಿಸಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದರು.
BIGG NEWS: ʼಆರೋಗ್ಯ ಸಚಿವ ಒಬ್ಬ ಅವಿವೇಕಿʼ; ವಿಮ್ಸ್ ಆಸ್ಪತ್ರೆಯಿಂದ ದುಡ್ಡು ಹೊಡೆದಿದ್ದಾರೆ- ಶಾಸಕ ನಾಗೇಂದ್ರ ಆರೋಪ
ಮೈಸೂರು ದಸರಾದಲ್ಲಿ ಭಾಗವಹಿಸಲಿರುವ ಗಣ್ಯರ ಬಗ್ಗೆ ಮಾಹಿತಿ ನೀಡಿದ ಅವರು, ರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮದ ಪಟ್ಟಿ ಅಂತಿಮವಾಗುತ್ತಿದೆ. ಅವರನ್ನು ಅರಮನೆಯ ಭೇಟಿ ಬಗ್ಗೆ ಈಗಾಗಲೇ ಕೇಳಲಾಗಿದೆ. ಆದರೆ ಇನ್ನೂ ರಾಷ್ಟ್ರಪತಿಗಳಿಂದ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ ಎಂದು ತಿಳಿಸಿದರು.
ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರದ 4 ಮಂತ್ರಿಗಳು ಬರುವ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ವೇದಿಕೆ ಮೇಲೆ ಕುಳಿತುಕೊಳ್ಳುವವರ ಪಟ್ಟಿ ಅಂತಿಮಗೊಳ್ಳುತ್ತದೆ.
BIGG NEWS: ʼಆರೋಗ್ಯ ಸಚಿವ ಒಬ್ಬ ಅವಿವೇಕಿʼ; ವಿಮ್ಸ್ ಆಸ್ಪತ್ರೆಯಿಂದ ದುಡ್ಡು ಹೊಡೆದಿದ್ದಾರೆ- ಶಾಸಕ ನಾಗೇಂದ್ರ ಆರೋಪ
ದಸರಾ ಪಾಸ್ ಹಾಗೂ ಗೋಲ್ಡ್ ಕಾರ್ಡ್ ಕುರಿತು ಇಂದು ಸಂಜೆಯೊಳಗೆ ಅಂತಿಮ ತೀರ್ಮಾನವಾಗುತ್ತದೆ. ಯುವದಸರಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಧ್ಯಾಹ್ನ ಸಭೆ ನಡೆಸಿ ಸಂಜೆಯೊಳಗೆ ತೀರ್ಮಾನವನ್ನು ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
BIGG NEWS: ʼಆರೋಗ್ಯ ಸಚಿವ ಒಬ್ಬ ಅವಿವೇಕಿʼ; ವಿಮ್ಸ್ ಆಸ್ಪತ್ರೆಯಿಂದ ದುಡ್ಡು ಹೊಡೆದಿದ್ದಾರೆ- ಶಾಸಕ ನಾಗೇಂದ್ರ ಆರೋಪ
ದಸರಾಗೆ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಹಣ ಬಿಡುಗಡೆ ಮಾಡಿರುವುದಾಗಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿದ್ಯುತ್ ದೀಪಾಲಂಕಾರಕ್ಕೆ 4.5 ಕೋಟಿ ರೂ. ನಿಗದಿ ಮಾಡಲಾಗಿದೆ. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡುತ್ತೇವೆ ಎಂದು ಎಸ್.ಟಿ.ಸೋಮಶೇಖರ್ ಸ್ವಷ್ಟನೆ ನೀಡಿದ್ದಾರೆ.