ಬೆಂಗಳೂರು: ಆಪರೇಷನ್ ಕಮಲಕ್ಕೆ ( Operation Kamala ) ನೀಡಿದ ಆಸೆ, ಅಮಿಷಗಳನ್ನು ಆಪರೇಷನ್ಗೆ ಒಳಪಟ್ಟವರೇ ಬಹಿರಂಗಪಡಿಸಿದ್ದಾರೆ. ಆಪರೇಷನ್ ಮಾಡಿಸಿಕೊಂಡವರ ಬೇಡಿಕೆಯನ್ನೇ ಪೂರೈಸದ ಬಿಜೆಪಿ ( BJP ) ಜನತೆಗೆ ನೀಡಿದ ಭರವಸೆ ಈಡೇರಿಸುವುದೇ?! ಬಿಜೆಪಿಯನ್ನು ನಂಬಿ ಹೋದವರಿಗೆ ಸಿಗುವ ಉಡುಗೊರೆ ನಂಬಿಕೆ ದ್ರೋಹ ಮಾತ್ರ, ಮತದಾರರಾದರೂ ಸರಿ, ಶಾಸಕರಾದರೂ ಸರಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ನೆರೆ ಸಂತ್ರಸ್ತ ‘ರೈತ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಬೆಳೆ ಪರಿಹಾರ’ಕ್ಕೆ 300 ಕೋಟಿ ರೂ ಬಿಡುಗಡೆ
ಈ ಬಗ್ಗೆ ಕಾಂಗ್ರೆಸ್ ಟ್ವಿಟ್ ಮಾಡಿದ್ದು, ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿಕೆಯ ವೀಡಿಯೋ ಶೇರ್ ಮಾಡಿದೆ. ಆ ವೀಡಿಯೋದಲ್ಲಿ ಅವರು, ಆರ್ ಶಂಕರ್ ಭಾರತೀಯ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. 17 ಜನರು ಈ ಸರ್ಕಾರ ಬರೋದಕ್ಕೆ ಕಾರಣರಾದವರು. ಅದರಲ್ಲಿ ಆರ್ ಶಂಕರ್ ರಾಣಿಬೆನ್ನೂರು ಕ್ಷೇತ್ರದಿಂದ ಆಯ್ಕೆಯಾದವರು ರಾಜೀನಾಮೆ ಕೊಟ್ಟ ಬಂದರು. ಸೇರಿ ಈ ಸರ್ಕಾರ ರಚನೆಗೆ ಕಾರಣರಾದರು. ಪಾಪ ಅವರಿಗೆ ಮತ್ತೆ ಎಲೆಕ್ಷನ್ ಗೆ ನಿಲ್ಲೋದಕ್ಕೂ ಅವಕಾಶ ಕೊಡಲಿಲ್ಲ ಎಂದಿದ್ದಾರೆ.
ಮತ್ತೆ ನಿಲ್ಲೋದಕ್ಕೆ ರಾಣಿಬೆನ್ನೂರಿನಿಂದ ನಿಲ್ಲೋದಕ್ಕೆ ಟಿಕೆಟ್ ಕೊಡಲಿಲ್ಲ. ಇದೇ ಅಶೋಕ್, ಬೊಮ್ಮಾಯಿ ಮನೆಗೆ ಹೋಗಿ ಮಂತ್ರಿ ಮಾಡುತ್ತೇವೆ ಎಂದು ಕರೆದುಕೊಂಡು ಬಂದರು. ಮಂತ್ರಿನೂ ಮಾಡದೇ ಇರೋ ನೋವನ್ನು ತೋಡಿಕೊಂಡಿದ್ದರು. ಪ್ರತಾಪ್ ಪಾಟೀಲ್ ಕತೆ ಏನ್ ಆಯಿತು.? 17 ಜನ ಬಾಂಬೆ ಬಾಯ್ಸ್ ಏನ್ ಹೋಗಿದ್ದವೆ ಅವರಲ್ಲಿ ಕೆಲವರಿಗೆ ಮಾತ್ರ ಅವಕಾಶ ಸಿಕ್ಕಿಗೆ. ಮತ್ತೆ ಕೆಲವರಿಗೆ ಸಿಕ್ಕಿಲ್ಲ ಎಂಬ ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ವರ್ಷದಲ್ಲಿ 30 ಐಟಿಐಗಳ ಉನ್ನತೀಕರಣ – ಸಚಿವ ಅಶ್ವತ್ಥನಾರಾಯಣ
ಈ ವೀಡಿಯೋ ಹೇಳಿಕೆ ಆಧರಿಸಿ ಕಾಂಗ್ರೆಸ್, ಆಪರೇಷನ್ ಕಮಲಕ್ಕೆ ನೀಡಿದ ಆಸೆ, ಅಮಿಷಗಳನ್ನು ಆಪರೇಷನ್ಗೆ ಒಳಪಟ್ಟವರೇ ಬಹಿರಂಗಪಡಿಸಿದ್ದಾರೆ. ಆಪರೇಷನ್ ಮಾಡಿಸಿಕೊಂಡವರ ಬೇಡಿಕೆಯನ್ನೇ ಪೂರೈಸದ ಬಿಜೆಪಿ ಜನತೆಗೆ ನೀಡಿದ ಭರವಸೆ ಈಡೇರಿಸುವುದೇ?! ಬಿಜೆಪಿಯನ್ನು ನಂಬಿ ಹೋದವರಿಗೆ ಸಿಗುವ ಉಡುಗೊರೆ ನಂಬಿಕೆ ದ್ರೋಹ ಮಾತ್ರ, ಮತದಾರರಾದರೂ ಸರಿ, ಶಾಸಕರಾದರೂ ಸರಿ ಎಂದು ಹೇಳಿದೆ.
ಆಪರೇಷನ್ ಕಮಲಕ್ಕೆ ನೀಡಿದ ಆಸೆ, ಅಮಿಷಗಳನ್ನು ಆಪರೇಷನ್ಗೆ ಒಳಪಟ್ಟವರೇ ಬಹಿರಂಗಪಡಿಸಿದ್ದಾರೆ.
ಆಪರೇಷನ್ ಮಾಡಿಸಿಕೊಂಡವರ ಬೇಡಿಕೆಯನ್ನೇ ಪೂರೈಸದ @BJP4Karnataka ಜನತೆಗೆ ನೀಡಿದ ಭರವಸೆ ಈಡೇರಿಸುವುದೇ?!
ಬಿಜೆಪಿಯನ್ನು ನಂಬಿ ಹೋದವರಿಗೆ ಸಿಗುವ ಉಡುಗೊರೆ ನಂಬಿಕೆ ದ್ರೋಹ ಮಾತ್ರ, ಮತದಾರರಾದರೂ ಸರಿ, ಶಾಸಕರಾದರೂ ಸರಿ!#BJPvsBJP pic.twitter.com/mxTHClQGs3
— Karnataka Congress (@INCKarnataka) September 17, 2022