ಬೆಂಗಳೂರು : ಚೀತಾ ವಿಷಯದಲ್ಲಿ ಕಾಂಗ್ರೆಸ್-ಬಿಜೆಪಿ ಕ್ರೆಡಿಟ್ ವಾರ್ ಶುರುವಾಗಿದ್ದು, ಕಳೆದ 7 ದಶಕಗಳ ಹಿಂದೆ ಭಾರತದಲ್ಲಿ(India) ನಶಿಸಿ ಹೋಗಿದ್ದ ಚೀತಾಗಳನ್ನು(Cheetah) ಶನಿವಾರ ನಮೀಬಿಯಾದಿಂದ(Namibia) ಭಾರತಕ್ಕೆ ತರಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ.
ಪ್ರಧಾನಿ ಮೋದಿ ತಮಾಷೆ ನಡೆಸ್ತಿದ್ದಾರೆ. 2019-11ರಲ್ಲಿ ಚಿತಾ ಪ್ರಾಜೆಕ್ಟ್ ಕಾಂಗ್ರೆಸ್ ಕೈಗೊಂಡಿತ್ತು. 2010ರಲ್ಲಿ ಕೇಪ್ಟೌನ್ನಲ್ಲಿ ಚೀತಾಗಳಲ್ಲಿ ಬಗ್ಗೆ ಚರ್ಚೆಯೂ ನಡೆಸಿತ್ತು. ಕಾಂಗ್ರೆಸ್ ಪ್ರಯತ್ನದ ಭಾಗವಾಗಿ ಭಾರತಕ್ಕೆ ಚೀತಾಗಳ ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಎಐಸಿಸಿ ಮಾಧ್ಯಮ ವಕ್ತಾರ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
PM hardly ever acknowledges continuity in governance. Cheetah project going back to my visit to Capetown on 25.04.2010 is the latest example. The tamasha orchestrated by PM today is unwarranted and is yet another diversion from pressing national issues and #BharatJodoYatra 1/2 pic.twitter.com/SiZQhQOu0N
— Jairam Ramesh (@Jairam_Ramesh) September 17, 2022