ಬೆಂಗಳೂರು : 2022 ರ ಏಪ್ರಿಲ್ ನಲ್ಲಿ ನಡೆದ `SSLC’ ಮುಖ್ಯ ಪರೀಕ್ಷೆಯ ಅಂಕಪಟ್ಟಿಯಲ್ಲಿನ ಹೆಸರು, ಜನ್ಮ ದಿನಾಂಕ ತಿದ್ದುಪಡಿ ಕೋಡಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಅಂತಿಮ ದಿನಾಂಕ ವಿಸ್ತರಣೆ ಮಾಡಲಾಗಿದೆ.
BIGG NEWS: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ- ಪ್ರಿಯಾಂಕ್ ಖರ್ಗೆ
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2022 ರ ಏಪ್ರಿಲ್ ನಲ್ಲಿ ನಡೆದ ಎಸ್ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಅಂಕಪಟ್ಟಿಗಳನ್ನು ಸಂಬಂಧಪಟ್ಟ ಶಾಲೆಗಳಿಗೆ ರವಾನಿಸಲಾಗಿರುತ್ತದೆ. ಸದರೀ ಅಂಕಪಟ್ಟಿಗಳಲ್ಲಿನ ಹೆಸರು/ಜನ್ಮದಿನಾಂಕಗಳ ತಿದ್ದುಪಡಿಗಳಿಗೆ ಶಾಲಾ ಮುಖ್ಯ ಶಿಕ್ಷಕರುಗಳಿಂದ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ದಿನಾಂಕ 02-09-2022 ರವರೆಗೆ 1 ಸಾವಿರ ರೂ.ಶುಲ್ಕ ಸಹಿತ ದಿನಾಂಕ ನಿಗದಿಪಡಿಸಲಾಗಿತ್ತು.
BIGG NEWS : ಗುಜರಾತ್ನ ‘ಕೆಮಿಕಲ್ ಕಂಪನಿ’ಯಲ್ಲಿ ಬೆಂಕಿ ಅವಘಡ : ಸ್ಥಳಕ್ಕೆ ಆಗಮಿಸಿದ ʻಅಗ್ನಿಶಾಮಕ ವಾಹನʼಗಳು
ಪ್ರಸ್ತುತ ಅಂತಿಮ ದಿನಾಂಕದ ನಂತರವೂ ಸಹ ಕೆಲವು ಪ್ರಸ್ತಾವನೆಗಳು ಮಂಡಳಿಗೆ ಸ್ವೀಕೃತವಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಹಿತದೃಷ್ಟಿಯಿಂದ ಅಂಕಪಟ್ಟಿಗಳಲ್ಲಿನ ತಿದ್ದುಪಡಿಗೆ ಮಂಡಳಿ ನಿಗದಿಪಡಿಸಿರುವ ದಾಖಲೆಗಳು ಮತ್ತು 1 ಸಾವಿರ ರೂ. ಶುಲ್ಕಗಳೊಂದಿಗೆ 17-09-2022 ರೊಳಗೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಈ ಮೂಲಕ ಸೂಚನೆ ನೀಡಿದೆ.