ವಡೋದರಾ: ಗುಜರಾತ್ನ ವಡೋದರದ 40 ವರ್ಷದ ಮಹಿಳೆಯೊಬ್ಬರು 2014 ರಲ್ಲಿ ವಿವಾಹವಾದ ವ್ಯಕ್ತಿ(ಹಿಂದೆ ಮಹಿಳೆ) ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನು ಎಂಬ ಆಘಾತಕಾರಿ ವಿಷಯ ತಿಳಿದು ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ವಡೋದರದ ಮಹಿಳೆ ಗೋತ್ರಿ ಎಂಬ ಮಹಿಳೆಯ ಪತಿ 2011ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರಿಗೆ ಒಬ್ಬಳು ಮಗಳಿದ್ದಾಳೆ. ನಂತ್ರ, 2014ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ವಿರಾಜ್ ವರ್ಧನ್ ಎಂಬ ವ್ಯಕ್ತಿಯ ಪರಿಚಯವಾಗಿ ಇಬ್ಬರೂ ಮದುವೆಯಾಗಿದ್ದಾರೆ. ಮದುವೆ ನಂತ್ರ ಇಬ್ಬರೂ ಹನಿಮೂನ್ಗೆಂದು ಕಾಶ್ಮೀರಕ್ಕೆ ಹನಿಮೂನ್ಗೆ ತೆರಳಿದರು. ಆದ್ರೆ, ಪತಿಯು ಲೈಂಗಿಕ ಕ್ರಿಯೆಗೆ ಅನುಮತಿಸಿಲ್ಲ. ಹೀಗೆ ಕೆಲವು ದಿನ ಕಳೆದ್ರೂ ವಿರಾಜ್ ಲೈಂಗಿಕ ಕ್ರಿಯೆಯಿಂದ ಗೋತ್ರಿಯನ್ನು ದೂರವೇ ಇಟ್ಟಿದ್ದ. ಇದ್ರಿಂದ ಅನುಮಾನಗೊಂಡ ಗೋತ್ರಿ ಕಾರಣ ತಿಳಿಯಲು ಪ್ರಯತ್ನಿಸಿದಳು. ಈ ವೇಳೆ ಬಾಯ್ಬಿಟ್ಟ ವಿರಾಜ್ ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿದ್ದಾಗ ಅಪಘಾತ ಸಂಭವಿಸಿತ್ತು. ಇದ್ರಿಂದಾಗಿ ನಾನು ಲೈಂಗಿಕವಾಗಿ ಹೊಂದಲು ಅಸಮರ್ಥನ್ನಾಗಿದ್ದೇನೆ. ಸಣ್ಣ ಶಸ್ತ್ರ ಚಿಕಿತ್ಸೆ ನಂತರ ಸಾಮಾನ್ಯ ಸ್ಥಿತಿಗೆ ಬರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ.
2020 ರ ಜನವರಿಯಲ್ಲಿ ಅವರು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಬಾರಿಯಾಟ್ರಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸುವುದಾಗಿ ವಿರಾಜ್ ತಿಳಿಸಿ ಕೋಲ್ಕತ್ತಾಗೆ ಹೋದರು. ನಂತರ, ವಿರಾಜ್ ವಾಸ್ತವವಾಗಿ ಪುರುಷ ಅಂಗಗಳನ್ನು ಅಳವಡಿಸಲು ಶಸ್ತ್ರಚಿಕಿತ್ಸೆಗೆ ಹೋಗಿದ್ದರು ಮತ್ತು ಬಾರಿಯಾಟ್ರಿಕ್ಸ್ ಶಸ್ತ್ರಚಿಕಿತ್ಸೆಯಲ್ಲ ಎಂದು ಪತ್ನಿಗೆ ತಿಳಿಸಿದ್ದಾನೆ.
ಇದಾದ ನಂತ್ರ, ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ಪ್ರಾರಂಭಿಸಿದನು. ಈ ಬಗ್ಗೆ ಯಾರೊಂದಿಗಾದರೂ ಮಾತನಾಡಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ನೊಂದ ಮಹಿಳೆ ಠಾಣೆ ಮೆಟ್ಟಿಲೇರಿದ್ದು, ವಿರಾಜ್ ವಿರುದ್ಧ ದೂರು ದಾಖಲಿಸಿದ್ದಾಳೆ.
ಆರೋಪಿ ವಿರಾಜ್ ನನ್ನ ಮಗಳ ಹೆಸರಿನಲ್ಲಿ 90 ಲಕ್ಷ ರೂಪಾಯಿ ಸಾಲ ಪಡೆದು ತಮ್ಮ ಕಾಲೋನಿಯಲ್ಲಿ ಫ್ಲ್ಯಾಟ್ ಕೂಡ ಖರೀದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದೀಗ ಆರೋಪಿಯನ್ನು ಬಂಧಿಸಿ ದೆಹಲಿಯಿಂದ ವಡೋದರಾಕ್ಕೆ ಕರೆತರಲಾಗಿದೆ ಎಂದು ಗೋತ್ರಿ ಪೊಲೀಸ್ ಇನ್ಸ್ಪೆಕ್ಟರ್ ಎಂ ಕೆ ಗುರ್ಜರ್ ತಿಳಿಸಿದ್ದಾರೆ.
BREAKING NEWS: ಬೆಳ್ಳಂಬೆಳಗ್ಗೆ ಲಡಾಖ್ನ ಲೇಹ್ನಲ್ಲಿ 4.8 ತೀವ್ರತೆಯ ಭೂಕಂಪ | Earthquake in Leh
Good News : ಗರ್ಭಿಣಿ, ಬಾಣಂತಿಯರಿಗೆ ಗುಡ್ ನ್ಯೂಸ್ : ಈ ಜಿಲ್ಲೆಗಳಲ್ಲಿ ಮನೆ ಬಾಗಿಲಿಗೇ `ಮಾತೃಪೂರ್ಣ’ ಸೌಲಭ್ಯ