ನವದೆಹಲಿ: ಭೂತಾನ್ ರಾಜ ಜಿಗ್ಮೆ ಖೇಸರ್ ನಾಂಗ್ಯೆಲ್ ವಾಂಗ್ಚುಕ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿ ಭೇಟಿ ಮಾಡಿದರು. ಇದೇ ವೇಳೆ ಭಾರತ-ಭೂತಾನ್ ಸ್ನೇಹವನ್ನು ಮತ್ತಷ್ಟು ಬಲಪಡಿಸಲು ವಿವಿಧ ವಿಚಾರಗಳನ್ನು ಇಬ್ಬರೂ ಗಣ್ಯರು ಚರ್ಚಿಸಿದ್ದಾರೆ ಎಂದು ಪಿಎಂಒ ಕಚೇರಿ ತಿಳಿಸಿದೆ.
ಈ ಕುರಿತಂತೆ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದು, ಭೂತಾನ್ ರಾಜನನ್ನು ಭೇಟಿ ಮಾಡಿದ್ದೇನೆ. ನಿಕಟ ಮತ್ತು ವಿಶಿಷ್ಟವಾದ ಭಾರತ-ಭೂತಾನ್ ಸ್ನೇಹವನ್ನು ಮತ್ತಷ್ಟು ಬಲಪಡಿಸಲು ವಿವಿಧ ವಿಚಾರಗಳನ್ನು ಚರ್ಚಿಸಲಾಗಿದೆ. ನಮ್ಮ ಸಂಬಂಧಗಳನ್ನು ರೂಪಿಸುವಲ್ಲಿ ಸತತ ಡ್ರುಕ್ ಗ್ಯಾಲ್ಪೋಸ್ ಒದಗಿಸಿದ ಮಾರ್ಗದರ್ಶಿ ದೃಷ್ಟಿಗೆ ನನ್ನ ಮೆಚ್ಚುಗೆಯನ್ನು ತಿಳಿಸಿದ್ದೇನೆ ಎಂದಿದ್ದಾರೆ.
Had a warm meeting with His Majesty the King of Bhutan. Discussed various ideas to further strengthen the close and unique India-Bhutan friendship. Conveyed my appreciation for the guiding vision provided by successive Druk Gyalpos in shaping our relations. pic.twitter.com/cmWW41lFrK
— Narendra Modi (@narendramodi) September 14, 2022
ಇದೇ ವೇಳೆ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.
‘UPI’ ಪಾವತಿದಾರರಿಗೆ ಸಿಹಿಸುದ್ದಿ ; ‘ಧ್ವನಿ ಆದೇಶ’ದ ಮೂಲಕ ‘ಸೇವೆ’ ಪಡೆಯುವ ಅವಕಾಶ