ಬೆಂಗಳೂರು: ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಂತ ನಟ ಮಂಡ್ಯ ರವಿ ( Actor Mandya Ravi ) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಸಾವನ್ನಪ್ಪಿದ್ದಾರೆ ಎಂಬುದು ವದಂತಿ, ಸುಳ್ಳು ಸುದ್ದಿಯಾಗಿದೆ ಎಂಬುದಾಗಿ ಅವರ ತಂದೆ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಕಿರುತೆರೆ ನಟ ಮಂಡ್ಯ ರವಿ ತಂದೆ ಮುದ್ದೇಗೌಡ ಮಾಹಿತಿ ನೀಡಿದ್ದು, ನನ್ನ ಪುತ್ರನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದ್ರೇ ಅವರು ಸಾವನ್ನಪ್ಪಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಅಂದಹಾಗೇ ನಟ ಮಂಡ್ಯ ರವಿಯವರು ಜಾಂಡೀಸ್ ನಿಂದಾಗಿ ಬಳಲುತ್ತಿದ್ದರು. ಈ ಬಳಿಕ ಕಿಡ್ನಿ ಸಮಸ್ಯೆ ಉಂಟಾಗಿ ಸ್ಥಿತಿ ಗಂಭೀರಗೊಂಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.