ಮುಂಬೈ: ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಜನರ ಗುಂಪೊಂದು ಹಲ್ಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ಜಿಲ್ಲೆಯ ಲವಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ, ಸಾಧುಗಳ ಮೇಲೆ ಜನರ ಗುಂಪೊಂದು ಕೋಲುಗಳಿಂದ ಮನಬಂದಂತೆ ಥಳಿಸಿವುದನ್ನು ನೋಡಬಹುದು. ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
महाराष्ट्र के सांगली में बच्चा चोरी की अफवाह पर लोगों ने साधू-संतों की पिटाई कर डाली..
पालघर जैसा कांड होते-होते बचा..#Sangli #Maharashtra @CMOMaharashtra @DGPMaharashtra pic.twitter.com/tcWRHMrwgL
— Vivek Gupta (@imvivekgupta) September 14, 2022
Four Sadhus have been brutally attacked by the villagers in Sangli, Maharashtra#MaharashtraNews #SadhusAttacked pic.twitter.com/BZ3gQnt4yK
— Neeraj Chauhan (@chauhanrneeraj) September 14, 2022
“ಈ ಘಟನೆ ಬಗ್ಗೆ ನಾವು ಯಾವುದೇ ದೂರನ್ನು ಸ್ವೀಕರಿಸಿಲ್ಲ. ಆದರೆ, ವೈರಲ್ ವೀಡಿಯೊಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಸತ್ಯವನ್ನು ಪರಿಶೀಲಿಸುತ್ತಿದ್ದೇವೆ. ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಂಗ್ಲಿ ಎಸ್ಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ
पंढरपुर में देव दर्शन के लिए जा रहे मथुरा के 4 साधुओं को बच्चा चोर समझकर महाराष्ट्र के सांगली में लाठी डंडों से जमकर पीटा गया.
Full Story Live @TV9Bharatvarsh pic.twitter.com/FTZmoE2UCy
— Samir Abbas (@TheSamirAbbas) September 14, 2022
ಉತ್ತರ ಪ್ರದೇಶದ ನಾಲ್ವರು ಸಾಧುಗಳು ಕರ್ನಾಟಕದ ಬಿಜಾಪುರದಿಂದ ಪಂಢರಪುರಕ್ಕೆ ತೆರಳುತ್ತಿದ್ದಾಗ ಬಾಲಕನಿಗೆ ದಾರಿ ಕೇಳಿದ್ದಾರೆ. ಇದು ಮಕ್ಕಳನ್ನು ಅಪಹರಿಸುವ ತಂಡದಿಂದ ಬಂದಿರಬಹುದು ಎಂದು ಸ್ಥಳೀಯರು ಶಂಕಿಸಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಘಟನೆಯನ್ನು ಖಂಡಿಸಿದ್ದಾರೆ ಮತ್ತು ರಾಜ್ಯ ಸರ್ಕಾರವು ಸಾಧುಗಳೊಂದಿಗೆ ಇಂತಹ “ದುಷ್ಕೃತ್ಯ” ವನ್ನು ಸಹಿಸುವುದಿಲ್ಲ ಎಂದು ಹೇಳಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
BIGG NEWS : ಹಾವೇರಿಯಲ್ಲಿ ಮಳೆಗೆ ಶಾಲೆಯ 11 ಕೊಠಡಿಗಳ ಪೈಕಿ 6 ಕೊಠಡಿಗಳು ಕುಸಿತ : ದುರಸ್ತಿಗಾಗಿ ಗ್ರಾಮಸ್ಥರ ಒತ್ತಾಯ
ಸೈರಸ್ ಮಿಸ್ತ್ರಿ ಸಾವು: ಅಪಘಾತಕ್ಕೀಡಾದ ಕಾರು ಪರೀಕ್ಷಿಸಲು ಥಾಣೆ ತಲುಪಿದ ಹಾಂಗ್ ಕಾಂಗ್ನ ಮರ್ಸಿಡಿಸ್ ತಜ್ಞರು
i-yojana-to-be-re-launched-from-october-2/