ಬೆಂಗಳೂರು: ಆಗಸ್ಟ್ 2022ರಲ್ಲಿ ನಡೆದಿದ್ದಂತ ಕರ್ನಾಟಕ ಮುಕ್ತ ಶಾಲೆಗಳ ( Karnataka Open School – KOS ) ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ( Karnataka Secondary Education Examination Board ) ಇಂದು ಪ್ರಕಟಿಸಿದೆ.
BREAKING: ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿ ಅಕ್ರಮ: FDA ಪ್ರಸಾದ್ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ
ಈ ಬಗ್ಗೆ ಮಾಹಿತಿ ನೀಡಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಪರೀಕ್ಷೆ ವಿಭಾಗದ ನಿರ್ದೇಶಕರು, ಆಗಸ್ಟ್ 2022ರಲ್ಲಿ ನಡೆದಿದ್ದಂತ ಕೆಓಎಸ್ ಪೂರಕ ಪರೀಕ್ಷೆಯ ಫಲಿತಾಂಶವನ್ನು ಮಂಡಳಿಯ ಜಾಲತಾಣ https://sslc.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದೆ.
ಎಣ್ಣೆ ಪ್ರಿಯರೇ, ಈ ‘ಆಲ್ಕೋಹಾಲ್’ ಕುಡಿದ್ರೆ ‘ಹೃದಯ ಸಂಬಂಧಿ ಕಾಯಿಲೆ’ಗಳು ದೂರವಾಗುತ್ವಂತೆ ; ಅಧ್ಯಯನ
ಒಂದು ವೇಳೆ ಯಾವುದಾದರೂ ಅಭ್ಯರ್ಥಿಗಳ ಫಲಿತಾಂಶ ಬಾರದಿದ್ದಲ್ಲಿ, ತಡೆಹಿಡಿದಿದ್ದಲ್ಲಿ, ಫಲಿತಾಂಶ ಪ್ರಕಟಿಸಿದ 15 ದಿನಗಳೊಳಗಾಗಿ ಸಕಾರಣಗಳೊಂದಿಗೆ ಮಂಡಳಿಗೆ ಪತ್ರ ಬರೆದು ಫಲಿತಾಂಶ ಪಡೆದುಕೊಳ್ಳಲು ತಿಳಿಸಿದೆ.
ಸಾಲಸೌಲಭ್ಯ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: ಮರಾಠ ಅಭಿವೃದ್ಧಿ ನಿಗಮದಿಂದ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಕೆಒಎಸ್ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ದಿನಾಂಕ 15-09-2022ರಂದು ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 20-09-2022 ಆಗಿದೆ. ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ, ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ದಿನಾಂಕ 16-09-2022ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-09-2022 ಆಗಿದೆ ಎಂದಿದ್ದಾರೆ.
ರಾಜಕಾಲುವೆ ಒತ್ತುವರಿದಾರರಿಗೆ ಬಿಗ್ ಶಾಕ್: ಬಿಬಿಎಂಪಿಯಿಂದ ಮಹದೇವಪುರ ವಲಯದ 15 ಸ್ಥಳಗಳಲ್ಲಿ ತೆರವು