ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 317 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ ಐವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ರಾಜಕಾಲುವೆ ಒತ್ತುವರಿದಾರರಿಗೆ ಬಿಗ್ ಶಾಕ್: ಬಿಬಿಎಂಪಿಯಿಂದ ಮಹದೇವಪುರ ವಲಯದ 15 ಸ್ಥಳಗಳಲ್ಲಿ ತೆರವು
ಈ ಕುರಿತು ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಮಾಹಿತಿ ನೀಡಲಾಗಿದ್ದು, ಇಂದು ಬೆಂಗಳೂರು ನಗರದಲ್ಲಿ 218, ಕೊಡಗು 31, ಮೈಸೂರು 12, ರಾಮನಗರ 17 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 317 ಜನರಿಗೆ ಕೋವಿಡ್ ( Covid19 ) ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 4058874ಕ್ಕೆ ಏರಿಕೆಯಾಗಿದೆ ಎಂದಿದೆ.
BREAKING: ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿ ಅಕ್ರಮ: FDA ಪ್ರಸಾದ್ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ
ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 638 ಜನರು ಸೇರಿದಂತೆ ಇದುವರೆಗೆ 4014665 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಈಗ 3945 ಸಕ್ರೀಯ ಸೋಂಕಿತರು ಇರುವುದಾಗಿ ಮಾಹಿತಿ ನೀಡಿದೆ.
ಎಣ್ಣೆ ಪ್ರಿಯರೇ, ಈ ‘ಆಲ್ಕೋಹಾಲ್’ ಕುಡಿದ್ರೆ ‘ಹೃದಯ ಸಂಬಂಧಿ ಕಾಯಿಲೆ’ಗಳು ದೂರವಾಗುತ್ವಂತೆ ; ಅಧ್ಯಯನ
ಇನ್ನೂ ಇಂದು ಬೆಂಗಳೂರು ನಗರದಲ್ಲಿ ಒಬ್ಬರು, ಮೈಸೂರಿನಲ್ಲಿ ಮೂವರು ಹಾಗೂ ಉಡುಪಿಯಲ್ಲಿ ಒಬ್ಬರು ಸೇರಿದಂತೆ ಐವರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 40222ಕ್ಕೆ ಏರಿಕೆಯಾಗಿದೆ.
ಸಾಲಸೌಲಭ್ಯ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: ಮರಾಠ ಅಭಿವೃದ್ಧಿ ನಿಗಮದಿಂದ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ