ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಮದ್ಯಪಾನ ಮಾಡೋದು ಆರೋಗ್ಯಕ್ಕೆ ಹಾನಿಕಾರಕ ಅಂತಾರೇ. ಆದ್ರೆ ಹೊಸ ಅಧ್ಯಯನವೊಂದು ಖುಷಿ ಸುದ್ದಿ ನೀಡಿದ್ದು, ಮದ್ಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ ಎಂದಿದೆ. ಆದ್ರೆ, ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಅನ್ನೋದು ನೆನಪಿರಲಿ.
ಇಷ್ಟಕ್ಕೂ ಆ ಆಲ್ಕೋಹಾಲ್ ಆದ್ರು ಯಾವುದು ಗೊತ್ತಾ? ಬಿಯರ್.. ಈ ಬಿಯರ್ ಮಿತಿಯಲ್ಲಿ ಒಂದು ಸೇವನೆ ಮಾಡಿದ್ರೆ, ಆರೋಗ್ಯಕ್ಕೆ ಒಳ್ಳೆಯದಂತೆ. ಅದ್ರಂತೆ, ಇತ್ತಿಚಿಗೆ ಮಹಿಳೆಯರು ಕೂಡ ಮದ್ಯಪಾನದ ಕಡೆ ಹೆಚ್ಚು ಒಲವು ತೋರಿಸುತ್ತಿದ್ದು, ವಾರಕ್ಕೆ ಎರಡು ಬಾರಿ ಬಿಯರ್ ಸೇವನೆ ಮಾಡುತಿದ್ದಾರೆ. ಹಾಗಾಗಿ ಇಂಹವರಲ್ಲಿ ಹೃದಯಾಘಾತವಾಗುವ ಸಂಭವ ಶೇ.30ರಷ್ಟು ಕಡಿಮೆ ಎಂದು ಸಂಶೋಧನೆಯೊಂದು ಹೇಳಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಸೇವಿಸಿದ್ರೆ, ಸಮಸ್ಯೆ ಎದುರಾಗುತ್ತೆ.
ಇನ್ನು ಈ ಬಿಯರ್ನಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುವ ಹೋಮೋಸಿಸ್ಟೈನ್ ಎಂಬ ಹಾನಿಕಾರಕ ರಾಸಾಯನಿಕವನ್ನ ದೇಹದಲ್ಲಿ ನಿರ್ಮಿಸುವುದನ್ನ ತಡೆಯುತ್ತೆ. ಇದಲ್ದೇ ಬಿಯರ್ ಸೇವಿಸುವುದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ. ಆದ್ರೆ, ಮಿತವಾಗಿ ಕುಡಿಯುವುದು ದೇಹಕ್ಕೆ ಹಿತ ಅಂತಾರೇ ಸಂಶೋಧಕರು.