ಬೆಂಗಳೂರು: ರಾಜ್ಯದ ವಿವಿಧ ತಾಲೂಕು ಪಂಚಾಯ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ದಿನಗೂಲಿ ನೌಕರರು, ಹೊರಗುತ್ತಿಗೆ ನೌಕರರ ಬಾಕಿ ವೇತನ, ವೈದ್ಯಕೀಯ ಮರುಪಾವತಿ ಸೇರಿದಂತೆ ವಿವಿಧ ಭತ್ಯೆ ಬಿಡುಗಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ತಾಲೂಕು ಪಂಚಾಯ್ತಿಗಳಲ್ಲಿ ವಿವಿಧ ಕಾರ್ಯಕ್ರಮದಡಿ ಅಧಿಕಾರಿ, ಸಿಬ್ಬಂದಿಯವರ ಬಾಕಿ, ಪ್ರಸಕ್ತ ವೇತನ, ದಿನಗೂಲಿ ನೌಕರರ ವೇತನ, ಹೊರಗುತ್ತಿಗೆ ನೌಕರರ ಸಂಭಾವನೆ, ವೈದ್ಯಕೀಯ ವೆಚ್ಚ ಮರುಪಾವತಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ಇದರಲ್ಲದೇ ಕೋವಿಡ್-19 ನಿಯಂತ್ರಣ ಕರ್ತವ್ಯದಲ್ಲಿ ಮರಣಹೊಂದಿದ ಸಿಬ್ಬಂದಿ ಅವಲಂಬಿತರಿಗೆ ಪರಿಹಾರ ನೀಡುವುದಕ್ಕಾಗಿ ಅಗತ್ಯವಿರುವ ಒಟ್ಟು ರೂ.656.28 ಲಕ್ಷ ಬಿಡುಗಡೆ ಮಾಡಿ ಆದೇಶಿಸಿದ್ದಾರೆ.