ಬೆಂಗಳೂರು : ಒತ್ತುವರಿ ತೆರವುಗೊಳಿಸುವ ( Removal of encroachments ) ಕಾರ್ಯಾಚರಣೆಯಲ್ಲಿ ಯಾವುದೇ ಭೇದಭಾವ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕಾಲುವೆ ಮೇಲೆ ಕಟ್ಟಡ,ಮನೆ ಕಟ್ಟಿರುವವರು, ಯಾರು ಕಾಲುವೆ ನೀರನ್ನು ಹರಿಸಲು ತೊಂದರೆ ಮಾಡಿದ್ದಾರೆ, ಕೆಲವರು ರಾಜಕಾಲುವೆಯನ್ನು ಮುಚ್ಚಿದ್ದಾರೆ. ಮಳೆ ನೀರು ಚರಂಡಿಗೆ ಅಡ್ಡಿಯಾಗಿದ್ದರೆ, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಪ್ರವಾಹ ಬಂದಾಗ ಐಟಿ ಬಿಟಿಯವರು ಸೇರಿದಂತೆ ಎಲ್ಲರಿಗೂ ತೊಂದರೆಯಾಗಿದೆ, ಜನಸಾಮಾನ್ಯರು, ಕೆಳಹಂತದ ಮನೆಗಳಿಗೂ ತೊಂದರೆಯಾಗಿದೆ. ಇವುಗಳನ್ನು ತೆರೆವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿ ಸಲಾಗುವುದು ಎಂದು ತಿಳಿಸಿದರು.
ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿ ನಿರ್ದೇಶನ ಪಡೆಯಲಾಗಿದೆ. ನ್ಯಾಯಾಲಯದಲ್ಲಿಯೂ ಗಂಭೀರವಾಗಿ ಇವುಗಳ ಮಾಹಿತಿಯನ್ನು ನೀಡಲಾಗುವುದು. ನ್ಯಾಯಾಲಯವೂ ಪ್ರವಾಹದ ಪ್ರಕರಣದಲ್ಲಿ ನಿರ್ದೇಶನಗಳನ್ನು ನೀಡಿದೆ. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣ ತೆರೆವುಗೊಳಿಸಲಾಗುವುದು ಎಂದರು.
BIGG NEWS : ಯಾರೇ ರಾಜಕಾಲುವೆ ಒತ್ತುವರಿ ಮಾಡಿದ್ರೂ ತೆರವು ಮಾಡ್ತೇವೆ : ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಪಿ.ಎಸ್.ಐ ನೇಮಕಾತಿ
ಪಿ.ಎಸ್.ಐ ಅಕ್ರಮ ನೇಮಕಾತಿ ಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಮಾತನಾಡಿರುವ ವೀಡಿಯೊ ಬಿಡುಗಡೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಆಡಿಯೋನೋ, ವೀಡಿಯೋನೋ ಗೊತ್ತಿಲ್ಲ. ಅದನ್ನು ಪರಿಶೀಲಿಸಲಾಗುವುದು. ಹಾಗೇನಾದರೂ ತಪ್ಪು ಕಂಡುಬಂದಲ್ಲಿ ತನಿಖೆಗೆ ಆದೇಶಿಸಲಾಗುವುದು ಎಂದರು.
BIGG NEWS : ಭಾರತದ ‘ಹಾಲು ಉತ್ಪಾದನೆ’ ಬೆಳವಣಿಗೆ ಜಾಗತಿಕ ಸರಾಸರಿಗಿಂತ ‘3 ಪಟ್ಟು’ ಹೆಚ್ಚಳ ; ಪ್ರಧಾನಿ ಮೋದಿ