ನವದೆಹಲಿ: ಕೋವಿಡ್ -19 ( Covid-19 ) ವಿರುದ್ಧ ಭಾರತದ ಮೊದಲ ಇಂಟ್ರಾನಾಸಲ್ ಲಸಿಕೆಯನ್ನು ( India’s first intranasal vaccine ) ಬಿಡುಗಡೆ ಮಾಡಿದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ( Bharat Biotech), ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drugs Controller General of India-DCGI)ಯಿಂದ ತಮ್ಮ ಇಂಟ್ರಾನಾಸಲ್ ಹೆಟೆರೋಲಾಗಸ್ ಬೂಸ್ಟರ್ಗಾಗಿ ಮಾರುಕಟ್ಟೆ ಅನುಮೋದನೆಯನ್ನು ಕೋರಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಭಾರತ್ ಬಯೋಟೆಕ್ 5-18 ವಯೋಮಾನದವರಲ್ಲಿ ಇಂಟ್ರಾನಾಸಲ್ ಲಸಿಕೆಯ ಮೂರನೇ ಹಂತದ ಅಧ್ಯಯನಕ್ಕಾಗಿ ಡಿಸಿಜಿಐ ಅನುಮೋದನೆ ಕೋರಿದೆ ಎಂದು ವರದಿ ತಿಳಿಸಿದೆ.
Bharat Biotech applies for market authorisation from DCGI for five arms intranasal heterologous booster
Read @ANI Story | https://t.co/GtPa14Xrpe #DCGI #Booster #bharatbiotech #Intranasal pic.twitter.com/zqjCpgx3pe
— ANI Digital (@ani_digital) September 11, 2022
ಇತ್ತೀಚೆಗೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕಳೆದ ಮಂಗಳವಾರ ಭಾರತ್ ಬಯೋಟೆಕ್ಗೆ ಇಂಟ್ರಾನಾಸಲ್ ಲಸಿಕೆಗಾಗಿ ತುರ್ತು ಬಳಕೆ ದೃಢೀಕರಣ (ಇಯುಎ) ನೀಡಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರಾಥಮಿಕ ಲಸಿಕೆ ನೀಡಲು ನಿಯಂತ್ರಕರು ಲಸಿಕೆಯನ್ನು ಅನುಮೋದಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದರು.