ನವದೆಹಲಿ : ಕ್ರೀಡಾಪಟುಗಳು ಮತ್ತು ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi ) ಅವರಿಗೆ ಉಡುಗೊರೆಯಾಗಿ ನೀಡಿದ 1,200 ಕ್ಕೂ ಹೆಚ್ಚು ವಸ್ತುಗಳನ್ನು ( 1,200 items gifted ) ಸೆಪ್ಟೆಂಬರ್ 17 ರಿಂದ ಹರಾಜು ಹಾಕಲಾಗುವುದು ಮತ್ತು ಅದರಿಂದ ಬರುವ ಆದಾಯವು ನಮಾಮಿ ಗಂಗೆ ಮಿಷನ್ಗೆ ( Namami Gange Mission ) ನೀಡಲಾಗುತ್ತಿದೆ.
ವೆಬ್ ಪೋರ್ಟಲ್ pmmementos.gov.in ಮೂಲಕ ಹರಾಜು ನಡೆಸಲಾಗುವುದು. ಈ ಉಡುಗೋರೆಗಳ ಹರಾಜು ಪ್ರಕ್ರಿಯೆ ಅಕ್ಟೋಬರ್ 2 ರಂದು ಕೊನೆಗೊಳ್ಳುತ್ತದೆ ಎಂದು ಉಡುಗೊರೆಗಳನ್ನು ಪ್ರದರ್ಶಿಸುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನ ಮಹಾನಿರ್ದೇಶಕ ಅದ್ವೈತ ಗದನಾಯಕ್ ತಿಳಿಸಿದ್ದಾರೆ.
ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ಸಾಮಾನ್ಯ ವ್ಯಕ್ತಿ ಮತ್ತು ವಿವಿಧ ಗಣ್ಯರು ನೀಡುವ ಉಡುಗೊರೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉಡುಗೊರೆಗಳನ್ನು ಹರಾಜು ಹಾಕಲಾಗುವುದು ಎಂದು ಅವರು ಹೇಳಿದರು.
ಉಡುಗೊರೆಗಳ ಮೂಲ ಬೆಲೆ 100 ರೂ.ಗಳಿಂದ 10 ಲಕ್ಷ ರೂ.ಗಳವರೆಗೆ ಇರುತ್ತದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಉಡುಗೊರೆಯಾಗಿ ನೀಡಿದ ರಾಣಿ ಕಮಲಪತಿ ಅವರ ಪ್ರತಿಮೆ, ಹನುಮಾನ್ ವಿಗ್ರಹ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಉಡುಗೊರೆಯಾಗಿ ನೀಡಿದ ಸೂರ್ಯ ವರ್ಣಚಿತ್ರ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಉಡುಗೊರೆಯಾಗಿ ನೀಡಿದ ತ್ರಿಶೂಲ್ ಹರಾಜು ಉಡುಗೊರೆಗಳ ಪಟ್ಟಿಯಲ್ಲಿ ಸೇರಿವೆ.
ಇದರಲ್ಲಿ ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮಿ ದೇವಿಯ ಪ್ರತಿಮೆ, ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಉಡುಗೊರೆಯಾಗಿ ನೀಡಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಉಡುಗೊರೆಯಾಗಿ ನೀಡಿದ ವೆಂಕಟೇಶ್ವರನ ಉಡುಗೋರಿಯನ್ನು ಹರಾಜಿಗೆ ಇಡಲಾಗಿದೆ. ಇದು ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳ ಇ-ಹರಾಜಿನ ನಾಲ್ಕನೇ ಆವೃತ್ತಿಯಾಗಿದೆ.