ಮುಂಬೈ: ವಾಟ್ಸಾಪ್ನಲ್ಲಿ ಸ್ನೇಹ ಬೆಳೆಸಿದ ಮುಂಬೈನ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬರು 5.28 ಲಕ್ಷ ರೂಪಾಯಿ ವಂಚಿಸಿದ ಘಟನೆ ವರದಿಯಾಗಿದೆ.
ಇತ್ತೀಚೆಗೆ, ಫೇಸ್ಬುಕ್ ಮೂಲಕ ಸ್ನೇಹಿತರಾದ ನಂತರ ವಾಟ್ಸಾಪ್ ವಿಡಿಯೋ ಕಾಲ್ ಮಾಡುವಾಗ ಬಟ್ಟೆ ತೆಗೆಯುವಂತೆ ಮಹಿಳೆ ಹೇಳಿದ್ದಾಳೆ. ಅವಳ ಮಾತು ನಂಬಿ ಬೆತ್ತಲಾದ 54 ವರ್ಷದ ವ್ಯಕ್ತಿ 5.28 ಲಕ್ಷ ರೂ. ಕಳೆದುಕೊಂಡಿದ್ದು, ಇದೀಗ ಆತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಏನಿದು ಘಟನೆ?
ಫೇಸ್ಬುಕ್ ಮೂಲಕ ಸ್ನೇಹಿತರಾದ ಇವರು ವಾಟ್ಸಾಪ್ನಲ್ಲಿವಿಡಿಯೋ ಕಾಲ್ ಕೂಡ ಮಾಡಿ ಮಾತನಾಡುತ್ತಿದ್ದರು. ಇದೇ ವೇಳೆ ವ್ಯಕ್ತಿಗೆ ನಗ್ನವಾಗುವಂತೆ ಮಹಿಳೆ ಹೇಳಿದಾಳೆ. ಅವಳ ಮಾತು ನಂಬಿ ಆತ ನಗ್ನವಾಗಿದ್ದಾನೆ. ಇದನ್ನು ವಿಡಿಯೋ ಮಾಡಿಕೊಂಡ ಮಹಿಳೆ ವಂಚಿಸಿದ್ದಾಳೆ. ನಂತ್ರ, ಮತ್ತೆ ಕರೆ ಮಾಡಿದ ಮಹಿಳೆ ಹಣಕ್ಕಾಗಿ ಬೇಡಿಕ ಇಟ್ಟಿದ್ದಾಳೆ. ಹಣ ಕೊಡದಿದ್ದರೆ, ವೊಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ ಮೆಂದು ಬೆದರಿಕೆ ಹಾಕಿದ್ದಾಳೆ. ಈ ವೇಳೆ ಆತ 30,000 ರೂ.ಗಳನ್ನು ವರ್ಗಾಯಿಸಿದ್ದಾನೆ.
BIGG NEWS : ಅರಣ್ಯಪ್ರದೇಶಗಳ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಡೆಯಲು ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ
ಮತ್ತೆ ಎರಡು ದಿನಗಳ ನಂತ್ರ, ಕೇಂದ್ರೀಯ ತನಿಖಾ ದಳದ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಸಂತ್ರಸ್ತನಿಗೆ ಕರೆ ಮಾಡಿ ನಿಮ್ಮ ನಗ್ನ ವೀಡಿಯೋ ವೈರಲ್ ಆಗಿ ಕರೆ ಬಂದಿದೆ. ನಿಮ್ಮನ್ನು ಬಂಧಿಸದಿರಲು ಹಣ ಕೊಡಬೇಕೆಂದು ಹೇಳೆದ್ದಾರೆ. ಇದರ ಬೆನ್ನಲ್ಲೇ, ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಯೂಟ್ಯೂನ್ನಲ್ಲಿ ನಿಮ್ಮ ವಿಡಿಯೋ ಪ್ರಸಾರವಾಗದಂತೆ ನೋಡಿಕೊಳ್ಳಲು ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಇಬ್ಬರು ಆರೋಪಿಗಳು ಸಂತ್ರಸ್ತನಿಂದ 5.28 ಲಕ್ಷ ರೂ. ಪಡೆದಿದ್ದಾರೆ.
ಇದರಿಂ ಬೇಸತ್ತ ವ್ಯಕ್ತಿ ಪೊಲೀಸ್ ಠಾಣೆ ಮೆಟಿಲೇರಿದ್ದು, ವಂಚನೆ ಮತ್ತು ಇತರ ಅಪರಾಧಗಳ ಪ್ರಕರಣವನ್ನು ದಾಖಲಿಸಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವಂಚನೆಗೊಳಗಾದ ವ್ಯಕ್ತಿಯ ಪತ್ನಿ 2019 ರಲ್ಲಿ ನಿಧನರಾಗಿದ್ದಾರೆ. ಆತ ಖಿನ್ನತೆಗೆ ಒಳಗಾಗಿದ್ದು, ಮನೆಯಲ್ಲೇ ಇರುತ್ತಾರೆ ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.