ನವದೆಹಲಿ : 2024ರ ಲೋಕಸಭೆ ಚುನಾವಣೆಗೆ ದೇಶದಲ್ಲಿ ಇಂದಿನ ದಿನಗಳಲ್ಲಿ ಸಿದ್ಧತೆಗಳು ಆರಂಭವಾಗಿದೆ. ಪ್ರತಿಯೊಂದು ಪಕ್ಷವೂ ತನ್ನದೇ ಆದ ಕಾರ್ಯತಂತ್ರವನ್ನ ರೂಪಿಸಲು ಪ್ರಾರಂಭಿಸಿದೆ. ಇಂತಹ ರಾಜಕೀಯ ವಾತಾವರಣದಲ್ಲಿ ಆಂಗ್ಲ ಮಾದ್ಯಮವೊಂದು ದೇಶದ ಮನಸ್ಥಿತಿಯನ್ನ ತೋರಿಸಲು ಹೊರಟಿದೆ. ಅದ್ರಂತೆ, ವಾಹಿನಿ ಸಿ ವೋಟರ್ ಕ್ಷಿಪ್ರ ಸಮೀಕ್ಷೆ ಮಾಡಿದ್ದು, ಸಮೀಕ್ಷೆಯಲ್ಲಿ 6 ಸಾವಿರದ 222 ಜನರೊಂದಿಗೆ ಮಾತುಕತೆ ನಡೆಸಲಾಗಿದೆ. ಸಮೀಕ್ಷೆಯಲ್ಲಿನ ದೋಷದ ಅಂಚು ಪ್ಲಸ್ ಮೈನಸ್ 3 ರಿಂದ ಪ್ಲಸ್ ಮೈನಸ್ ಶೇಕಡಾ 5 ಆಗಿದೆ.
ಗಾಂಧಿ ಕುಟುಂಬದ ಹೊರಗಿರುವ ಪಕ್ಷದ ಅಧ್ಯಕ್ಷರಿಂದ ಕಾಂಗ್ರೆಸ್ಗೆ ಲಾಭವೋ ಅಥವಾ ಹಾನಿಯೋ ಎಂಬ ಪ್ರಶ್ನೆಯನ್ನ ಈ ಸಮೀಕ್ಷೆಯಲ್ಲಿ ಕೇಳಲಾಗಿದೆ. ಈ ಕುರಿತು ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. ಈ ಪ್ರಶ್ನೆಗೆ ಉತ್ತರವಾಗಿ ಶೇ.64ರಷ್ಟು ಜನರು ಅನುಕೂಲವಾಗಲಿದೆ ಎಂದು ಹೇಳಿದ್ದು, ಶೇ.36ರಷ್ಟು ಮಂದಿ ನಷ್ಟದ ಪರವಾಗಿ ಮತ ಹಾಕಿದ್ದಾರೆ.